ನಾಗ್ಪುರ: ದ್ವಿತೀಯ ಟೆಸ್ಟ್ ಪಂದ್ಯದ ಮೊದಲ ದಿನ ಟೀಂ ಇಂಡಿಯಾ ಅಂದುಕೊಂಡಂತೆ ಲಂಕಾವನ್ನು 205 ಕ್ಕೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾಗಿದೆ. ಆದರೆ ಕೆಎಲ್ ರಾಹುಲ್ ಆರಂಭದಲ್ಲೇ ಕೈ ಕೊಟ್ಟಿದ್ದರಿಂದ ಆರಂಭಿಕ ಆಘಾತವನ್ನು ಪಡೆದಿದೆ.
ಮೊದಲ ದಿನದಂತ್ಯಕ್ಕೆ ಟೀಂ ಇಂಡಿಯಾ 11 ರನ್ ಗಳಿಗೆ 1 ವಿಕೆಟ್ ಕಳೆದುಕೊಂಡು ಇನ್ನೂ ಲಂಕಾ ಮೊದಲ ಇನಿಂಗ್ಸ್ ಮೊತ್ತಕ್ಕಿಂತ 194 ರನ್ ಹಿಂದೆ ಇದೆ. ಮುರಳಿ ವಿಜಯ್ ಮತ್ತು ಚೇತೇಶ್ವರ ಪೂಜಾರ ತಲಾ 2 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ.
ಇದಕ್ಕೂ ಮೊದಲು ಲಂಕಾದ ಮೊದಲ ಇನಿಂಗ್ಸ್ ನ್ನು ಕೇವಲ 205 ರನ್ ಗಳಿಗೆ ಕಟ್ಟಿ ಹಾಕಲು ಭಾರತದ ಸ್ಪಿನ್ ಜೋಡಿ ಅಶ್ವಿನ್-ಜಡೇಜಾ ಪ್ರಮುಖ ಮಾತ್ರ ವಹಿಸಿದರು. ಅಶ್ವಿನ್ 4 ವಿಕೆಟ್ ಪಡೆದರೆ ಜಡೇಜಾ 3 ವಿಕೆಟ್ ಬುಟ್ಟಿಗೆ ಹಾಕಿಕೊಂಡರು. ಬಹಳ ದಿನಗಳ ನಂತರ ಅವಕಾಶ ಪಡೆದ ವೇಗಿ ಇಶಾಂತ್ ಶರ್ಮಾ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡು 3 ವಿಕೆಟ್ ಕಿತ್ತರು. ಆದರೆ ಉಮೇಶ್ ಯಾದವ್ ವಿಕೆಟ್ ಇಲ್ಲದೇ ನಿರಾಸೆ ಅನುಭವಿಸಿದರು. ಲಂಕಾ ಪರ ನಾಯಕ ದಿನೇಶ್ ಚಂಡಿಮಾಲ್ ಮತ್ತು ಕರುಣರತ್ನೆ ಅರ್ಧಶತಕ ಗಳಿಸಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ