Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ನಾಗ್ಪುರ: ಭಾರತ ಮತ್ತು ಶ್ರೀಲಂಕಾ ನಡುವೆ ನಾಗ್ಪುರದಲ್ಲಿ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಲಂಕಾ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಿಸಿಕೊಂಡಿದೆ.
ಆದರೆ ಟಾಸ್ ಸೋತಿರುವ ಟೀಂ ಇಂಡಿಯಾಕ್ಕೆ ವೇಗದ ಬೌಲಿಂಗ್ ಡಿಪಾರ್ಟ್ ಮೆಂಟ್ ನಲ್ಲಿ ಬರೆ ಎಳೆದಂತಾಗಿದೆ. ಭುವನೇಶ್ವರ್ ಕುಮಾರ್ ಮದುವೆಗಾಗಿ ಬಿಡುವು ಪಡೆದುಕೊಂಡಿದ್ದರೆ, ಕಳೆದ ಪಂದ್ಯದಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದ ಇನ್ನೊಬ್ಬ ಬೌಲರ್ ಮೊಹಮ್ಮದ್ ಶಮಿ ಗಾಯದ ಕಾರಣದಿಂದ ತಂಡದಿಂದ ಔಟ್ ಆಗಿದ್ದಾರೆ.
ಶಮಿ ಜಾಗಕ್ಕೆ ಇಶಾಂತ್ ಶರ್ಮಾ ಆಗಮನವಾಗಿದೆ. ಅಚ್ಚರಿಯೆಂಬಂತೆ ಕಳೆದ ಪಂದ್ಯದಲ್ಲಿ ಬ್ಯಾಟಿಂಗ್ ಸೊರಗಿದ್ದ ಕಾರಣಕ್ಕೆ ಈ ಪಂದ್ಯದಲ್ಲಿ ರೋಹಿತ್ ಶರ್ಮಾಗೆ ಅವಕಾಶ ನೀಡಲಾಗಿದೆ. ಭಾರತ ಇಬ್ಬರು ವೇಗಿಗಳು ಮತ್ತು ಇಬ್ಬರು ಸ್ಪಿನ್ನರ್ ಗಳೊಂದಿಗೆ ಕಣಕ್ಕಿಳಿಯುತ್ತಿದೆ. ಶಿಖರ್ ಧವನ್ ಜಾಗಕ್ಕೆ ಮುರಳಿ ವಿಜಯ್ ಆಗಮನವಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ