ನಾಗ್ಪುರ: ಟೀಂ ಇಂಡಿಯಾದಲ್ಲಿ ಈಗ ಸ್ಥಾನ ಉಳಿಸಿಕೊಳ್ಳಬೇಕಾದರೆ ಸಿಗುವುದು ಒಂದೇ ಛಾನ್ಸ್. ಅದನ್ನು ತಪ್ಪಿಸಿದರೆ ಮತ್ತೆ ತಂಡದಲ್ಲಿ ತಮ್ಮ ಸ್ಥಾನ ಬೇರೆಯವರದಾಗುತ್ತದೆ ಎನ್ನುವುದು ಮುರಳಿ ವಿಜಯ್ ಗೆ ಚೆನ್ನಾಗಿ ಅರ್ಥವಾಗಿದೆ.
ಹಾಗಾಗಿಯೇ ಬಹುದಿನಗಳ ನಂತರ ಸಿಕ್ಕ ಅವಕಾಶವನ್ನು ಚೆನ್ನಾಗಿಯೇ ಬಳಸಿಕೊಂಡ ತಮಿಳುನಾಡು ಮೂಲದ ಬ್ಯಾಟ್ಸ್ ಮನ್ ಶ್ರೀಲಂಕಾ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಅರ್ಧಶತಕ (56) ಗಳಿಸಿ ಆಡುತ್ತಿದ್ದಾರೆ. ಅಷ್ಟೇ ಅಲ್ಲ, ಕೆಎಲ್ ರಾಹುಲ್ ಆರಂಭದಲ್ಲಿಯೇ ನೀಡಿದ್ದ ಆಘಾತದಿಂದ ತಂಡವನ್ನು ಚೇತೇಶ್ವರ ಪೂಜಾರ (33) ಜತೆ ಸೇರಿಕೊಂಡು ಮೇಲೆತ್ತಿದ್ದಾರೆ. ಇದರೊಂದಿಗೆ ಟೀಂ ಇಂಡಿಯಾ ಭೋಜನ ವಿರಾಮದ ವೇಳೆಗೆ 1 ವಿಕೆಟ್ ನಷ್ಟಕ್ಕೆ 97 ರನ್ ಗಳಿಸಿದೆ.
ಬಹುದಿನಗಳ ನಂತರ ಅವಕಾಶ ಪಡೆದ ಮುರಳಿ ಕೆಲವೊಂದು ಮನಮೋಹಕವೆನಿಸುವ ಶಾಟ್ ಹೊಡೆದು ಮನಸೂರೆಗೊಂಡರು. ಅವರಿಗೆ ಪೂಜಾರ ತಕ್ಕ ಸಾಥ್ ನೀಡಿದರು. ಎಂದಿನಂತೆ ಡಿಫೆನ್ಸಿವ್ ಹೊಡೆತಗಳಿಗೆ ಹೆಚ್ಚು ಮೊರೆ ಹೋದ ಪೂಜಾರ ತಂಡಕ್ಕೆ ಹೆಚ್ಚಿನ ಡ್ಯಾಮೇಜ್ ಆಗದಂತೆ ನೋಡಿಕೊಂಡಿದ್ದಾರೆ. ಇದೀಗ ಟೀಂ ಇಂಡಿಯಾಗೆ ಲಂಕಾದ ಮೊದಲ ಇನಿಂಗ್ಸ್ ಮೊತ್ತ ದಾಟಲು ರನ್ ಗಳಿಸಿದರೆ ಸಾಕು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ