Publish Date: Fri, 30 Sep 2022 (16:42 IST)
Updated Date: Fri, 30 Sep 2022 (16:45 IST)
ಮುಂಬೈ: ಗಾಯಗೊಂಡು ಟೀಂ ಇಂಡಿಯಾದಿಂದ ಹೊರಬಿದ್ದಿರುವ ಪ್ರಮುಖ ವೇಗಿ ಜಸ್ಪ್ರೀತ್ ಬುಮ್ರಾ ಸ್ಥಾನಕ್ಕೆ ಬಿಸಿಸಿಐ ಮೊಹಮ್ಮದ್ ಸಿರಾಜ್ ರನ್ನು ಸೇರ್ಪಡೆಗೊಳಿಸಿದೆ.
ಆರ್ ಸಿಬಿ ವೇಗಿ ಫಾರ್ಮ್ ಕೊರತೆಯಿಂದಾಗಿ ತಂಡದಿಂದ ಕೆಲವು ಸರಣಿಯಿಂದ ಹೊರಗುಳಿದಿದ್ದರು. ಇದೀಗ ಮತ್ತೆ ಕಮ್ ಬ್ಯಾಕ್ ಮಾಡುತ್ತಿದ್ದಾರೆ.
ಬುಮ್ರಾ ಬೆನ್ನು ನೋವಿಗೊಳಗಾಗಿದ್ದು ಇನ್ನು ಆರು ತಿಂಗಳು ತಂಡದಿಂದ ಹೊರಗುಳಿಯುವ ಸಾಧ‍್ಯತೆಯಿದೆ. ಹೀಗಾಗಿ ಬಿಸಿಸಿಐ ಅನಿವಾರ್ಯವಾಗಿ ಮತ್ತೊಬ್ಬ ವೇಗಿಯನ್ನು ಆಯ್ಕೆ ಮಾಡಿದೆ.
-Edited by Rajesh Patil