ತಿರುವನಂತಪುರಂ: ಭಾರತ ಮತ್ತು ದ.ಆಫ್ರಿಕಾ ನಡುವಿನ ಮೊದಲನೇ ಟಿ20 ಪಂದ್ಯವನ್ನು ಟೀಂ ಇಂಡಿಯಾ 8 ವಿಕೆಟ್ ಗಳಿಂದ ಗೆದ್ದುಕೊಂಡಿದೆ.
ಮೊದಲು ಬ್ಯಾಟಿಂಗ್ ಮಾಡಿದ ಆಫ್ರಿಕಾ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 106 ರನ್ ಗಳಿಸಲಷ್ಟೇ ಶಕ್ತವಾಯಿತು. ಪಿಚ್ ಆರಂಭದಲ್ಲಿ ಬೌಲರ್ ಗಳಿಗೆ ಸಹಕಾರಿಯಾಗುತ್ತಿತ್ತು. ಇದರಿಂದಾಗಿ ಆಫ್ರಿಕಾ ರನ್ ಗಳಿಸಲು ತಿಣುಕಾಡಿತು.
ಬಳಿಕ ಬ್ಯಾಟಿಂಗ್ ನಡೆಸಿದ ಟೀಂ ಇಂಡಿಯಾ ಆರಂಭದಲ್ಲೇ ನಾಯಕ ರೋಹಿತ್ ಶರ್ಮಾ (0) ವಿಕೆಟ್ ಕಳೆದುಕೊಂಡಿತು. ಬಳಿಕ ವಿರಾಟ್ ಕೊಹ್ಲಿ ಕೂಡಾ (3) ಬೇಗನೇ ಔಟಾದರು. ಬಳಿಕ ಜೊತೆಯಾದ ಕೆಎಲ್ ರಾಹುಲ್-ಸೂರ್ಯಕುಮಾರ್ ಜೋಡಿ ಕೊನೆಯವರೆಗೂ ಅಜೇಯವಾಗುಳಿದು ಭಾರತಕ್ಕೆ 16.4 ಓವರ್ ಗಳಲ್ಲಿ ಗೆಲುವು ಕೊಡಿಸಿದರು. ಭಾರತ ಅಂತಿಮವಾಗಿ 2 ವಿಕೆಟ್ ನಷ್ಟಕ್ಕೆ 110 ರನ್ ಗಳಿಸಿತು. ರಾಹುಲ್ ಅಜೇಯ 51 ರನ್ ಗಳಿಸಿದರೆ ಸೂರ್ಯಕುಮಾರ್ ಯಾದವ್ ಬಿರುಸಿನ ಆಟವಾಡಿ ಅಜೇಯ 50 ರನ್ ಗಳಿಸಿದರು.