Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಜೊಹಾನ್ಸ್ ಬರ್ಗ್: ವಿರಾಟ್ ಕೊಹ್ಲಿ ಗಾಯಗೊಂದು ದ.ಆಫ್ರಿಕಾ ವಿರುದ್ಧ ದ್ವಿತೀಯ ಟೆಸ್ಟ್ ಪಂದ್ಯದಿಂದ ಹೊರಗುಳಿದ ಬೆನ್ನಲ್ಲೇ ಟೀಂ ಇಂಡಿಯಾದಲ್ಲಿ ಮತ್ತೋರ್ವ ಆಟಗಾರ ಗಾಯಗೊಂಡಿರುವ ಸುದ್ದಿ ಬಂದಿದೆ.
ವೇಗಿ ಮೊಹಮ್ಮದ್ ಸಿರಾಜ್ ನಿನ್ನೆ ಪಂದ್ಯದ ನಡುವೆ ಗಾಯಗೊಂಡಿದ್ದು, ಬಳಿಕ ಪೆವಿಲಿಯನ್ ಗೆ ಮರಳಬೇಕಾಯಿತು. ಅವರ ಗಾಯದ ಕುರಿತು ಬಳಿಕ ಮಾಧ್ಯಮಗಳಿಗೆ ಆರ್ ಅಶ್ವಿನ್ ಮಾಹಿತಿ ನೀಡಿದ್ದಾರೆ.
ಮೊಹಮ್ಮದ್ ಸಿರಾಜ್ ಸ್ಥಿತಿಗತಿಯನ್ನು ವೈದ್ಯಕೀಯ ತಂಡ ಪರಿಶೀಲಿಸುತ್ತಿದೆ. ಪ್ರಾಥಮಿಕ ಚಿಕಿತ್ಸೆ ನಡೆದಿದ್ದು, ಅವರು ಬೇಗನೇ ಚೇತರಿಸಿಕೊಳ್ಳಬಹುದು ಎಂಬ ವಿಶ್ವಾಸವಿದೆ ಎಂದು ಅಶ್ವಿನ್ ಹೇಳಿದ್ದಾರೆ.