ಜೊಹಾನ್ಸ್ ಬರ್ಗ್: ಭಾರತ ಮತ್ತು ದ.ಆಫ್ರಿಕಾ ನಡುವೆ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ದಿನದಂತ್ಯಕ್ಕೆ ಅತಿಥೇಯರು ಸಮಾಧಾನಕರ ಬ್ಯಾಟಿಂಗ್ ನಡೆಸಿದ್ದಾರೆ.
ಭಾರತ ಮೊದಲ ಇನಿಂಗ್ಸ್ ನಲ್ಲಿ 202 ರನ್ ಗಳಿಗೆ ಆಲೌಟ್ ಆಗಿತ್ತು. ನಾಯಕ ಕೆಎಲ್ ರಾಹುಲ್ 50 ರನ್ ಗಳಿಸಿದ್ದು ಬಿಟ್ಟರೆ ಉಳಿದವರಿಂದ ಉತ್ತಮ ಬ್ಯಾಟಿಂಗ್ ಬರಲಿಲ್ಲ. ಇದಕ್ಕೆ ಉತ್ತರವಾಗಿ ಆಫ್ರಿಕಾ ನಿನ್ನೆಯ ದಿನದಂತ್ಯಕ್ಕೆ 1 ವಿಕೆಟ್ ನಷ್ಟಕ್ಕೆ 35 ರನ್ ಗಳಿಸಿದೆ.
ಆಡನ್ ಮರ್ಕರಮ್ ವಿಕೆಟ್ ನ್ನು ಮೊಹಮ್ಮದ್ ಶಮಿ ಕಬಳಿಸಿದರು. ರಿಷಬ್ ಪಂತ್ ಕ್ಯಾಚ್ ಕೈ ಚೆಲ್ಲದೇ ಹೋಗಿದ್ದರೆ ಪೀಟರ್ಸನ್ ಕೂಡಾ ಪೆವಿಲಿಯನ್ ಸೇರಿಕೊಳ್ಳಬೇಕಾಗಿತ್ತು. ಆಗ ಸಂಪೂರ್ಣವಾಗಿ ಭಾರತ ಮೇಲುಗೈ ಸಾಧಿಸುತ್ತಿತ್ತು. ಆದರೆ ದುರದೃಷ್ಟವಶಾತ್ ಆಗಲಿಲ್ಲ. ಇದೀಗ ಪೀಟರ್ಸನ್ 14, ಡೀನ್ ಎಲ್ಗರ್ 11 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ.