Publish Date: Thu, 27 Jul 2023 (16:27 IST)
Updated Date: Thu, 27 Jul 2023 (16:28 IST)
ಬಾರ್ಬಡೋಸ್: ವೆಸ್ಟ್ ಏಕದಿನ ಸರಣಿಗೆ ಕೆಲವೇ ಕ್ಷಣಗಳಿರುವಾಗ ಟೀಂ ಇಂಡಿಯಾಗೆ ವೇಗಿ ಮೊಹಮ್ಮದ್ ಸಿರಾಜ್ ರೂಪದಲ್ಲಿ ಆಘಾತ ಸಿಕ್ಕಿದೆ.
ಅನುಭವಿಗಳ ಅನುಪಸ್ಥಿತಿಯಲ್ಲಿ ಮೊಹಮ್ಮದ್ ಸಿರಾಜ್ ತಂಡದ ಬೌಲಿಂಗ್ ವಿಭಾಗದ ಮುಂದಾಳತ್ವ ವಹಿಸಬೇಕಿತ್ತು. ಆದರೆ ಗಾಯದ ಕಾರಣದಿಂದ ಅವರು ಸರಣಿಯಿಂದಲೇ ಹೊರಗುಳಿಯಲಿದ್ದು, ಇದೀಗ ಭಾರತಕ್ಕೆ ವಾಪಸ್ ಆಗುತ್ತಿದ್ದಾರೆ.
ಇತ್ತೀಚೆಗೆ ನಡೆದ ಟೆಸ್ಟ್ ಸರಣಿಯಲ್ಲಿ ಸಿರಾಜ್ ಸತತವಾಗಿ ಬೌಲಿಂಗ್ ನಡೆಸಿದ್ದರು. ಇದೀಗ ಅವರಿಗೆ ಪಾದದಲ್ಲಿ ಸಣ್ಣ ಮಟ್ಟಿನ ನೋವು ಕಾಣಿಸಿಕೊಂಡು ಮುನ್ನೆಚ್ಚರಿಕೆ ಕ್ರಮವಾಗಿ ವಿಶ್ರಾಂತಿ ನೀಡಲಾಗಿದೆ. ಮುಂಬರುವ ಏಕದಿನ ವಿಶ್ವಕಪ್ ದೃಷ್ಟಿಯಿಂದ ಅವರು ಫಿಟ್ ಆಗಿರುವುದು ತಂಡಕ್ಕೆ ಮುಖ್ಯವಾಗಿದೆ.