Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬಾರ್ಬಡೋಸ್: ವೆಸ್ಟ್ ಇಂಡೀಸ್ ನಲ್ಲಿ ಬಂದಾಗಿನಿಂದ ಟೀಂ ಇಂಡಿಯಾ ಕ್ರಿಕೆಟಿಗರಿಗೆ ಪ್ರಯಾಣದ್ದೇ ಕಿರಿ ಕಿರಿಯಾಗಿದೆ.
ಟೆಸ್ಟ್ ಸರಣಿಗೆ ಮೊದಲು ಹೋಟೆಲ್ ನಿಂದ ಮೈದಾನಕ್ಕೆ ದೂರ ಪ್ರಯಾಣ ಮಾಡಬೇಕೆಂಬುದು ಕ್ರಿಕೆಟಿಗರ ಅಸಮಾಧಾನಕ್ಕೆ ಕಾರಣವಾಗಿತ್ತು. ಇದೀಗ ಏಕದಿನ ಸರಣಿ ನಡೆಯುವ ಬಾರ್ಬಡೋಸ್ ಗೆ ತೆರಳಲು ವಿಮಾನ ವಿಳಂಬವಾಗಿದ್ದರಿಂದ ನಿದ್ರೆ ಹಾಳಾಗಿದೆ ಎಂದು ಕ್ರಿಕೆಟಿಗರು ಬಿಸಿಸಿಐ ಮುಂದೆ ಆಕ್ರೋಶ ತೋಡಿಕೊಂಡಿದ್ದಾರೆ ಎನ್ನಲಾಗಿದೆ.
ಟೆಸ್ಟ್ ತಂಡದಲ್ಲಿ ಆಡಿದ್ದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮುಂತಾದವರು ಏಕದಿನ ಸರಣಿಯಲ್ಲಿ ಪಾಲ್ಗೊಳ್ಳಲು ಟ್ರಿನಿಡಾಡ್ ನಿಂದ ಬಾರ್ಬಡೋಸ್ ಗೆ ಬೆಳಿಗ್ಗೆ 11 ಗಂಟೆಗೆ ವಿಮಾನವೇರಬೇಕಿತ್ತು. ಆದರೆ ಅಪರಾಹ್ನ 3 ಗಂಟೆಗೆ ವಿಮಾನ ಟೇಕ್ ಆಫ್ ಆಗಿದೆ. ಇದರಿಂದಾಗಿ ವಿಶ್ರಾಂತಿ ಇಲ್ಲದಾಗಿದೆ ಎಂದು ಹಿರಿಯರ ಕ್ರಿಕೆಟಿಗರು ಬಿಸಿಸಿಐಗೆ ಪತ್ರ ಬರೆದು ಅಸಮಾಧಾನ ತೋಡಿಕೊಂಡಿದ್ದಾರೆ ಎಂದು ವರದಿಯಾಗಿದೆ.