ಮುಂಬೈ: ಭಾರತ ತಂಡದ ವೇಗಿ ಮೊಹಮ್ಮದ್ ಶಮಿ ಅವರು ದೇಶಕ್ಕಾಗಿ ತಮ್ಮ ರಂಜಾನ್ ಉಪವಾಸ ಮುರಿದಿದ್ದಾರೆ. ಮೊಹಮ್ಮದ್ ಶಮಿ ನಡಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆದರೆ, ಅಖಿಲ ಭಾರತ ಮುಸ್ಲಿಂ ಜಮಾತ್ ಅಧ್ಯಕ್ಷರು ಶಮಿ ನಡೆಯನ್ನು ಟೀಕಿಸುವ ಭರದಲ್ಲಿ ವಿವಾದ ಸೃಷ್ಟಿಸಿದ್ದಾರೆ.
ರಂಜಾನ್ ಸಮಯದಲ್ಲಿ ರೋಜಾ ಆಚರಿಸದ ಭಾರತೀಯ ಕ್ರಿಕೆಟರ್ ಮೊಹಮ್ಮದ್ ಶಮಿಯನ್ನು ಅಪರಾಧಿ ಎಂದು ಕರೆಯುವ ಮೂಲಕ ಅಖಿಲ ಭಾರತ ಮುಸ್ಲಿಂ ಜಮಾತ್ ಅಧ್ಯಕ್ಷ ಮೌಲಾನಾ ಶಹಾಬುದ್ದೀನ್ ರಜ್ವಿ ಬರೇಲ್ವಿ ಅವರು ವಿವಾದವನ್ನು ಹುಟ್ಟುಹಾಕಿದ್ದಾರೆ.
ರೋಜಾ ಇಟ್ಟುಕೊಳ್ಳದೆ ಅವರು (ಮೊಹಮ್ಮದ್ ಶಮಿ) ಅಪರಾಧ ಮಾಡಿದ್ದಾರೆ, ಅವರು ಇದನ್ನು ಮಾಡಬಾರದು. ಶರಿಯತ್ ದೃಷ್ಟಿಯಲ್ಲಿ ಅವರು ಅಪರಾಧಿ, ಅವರು ದೇವರಿಗೆ ಉತ್ತರಿಸಬೇಕಾಗುತ್ತದೆ ಎಂದು ಮೌಲಾನಾ ಬರೇಲ್ವಿ ಹೇಳಿದ್ದಾರೆ.
ರೋಜಾಕಡ್ಡಾಯ ಕರ್ತವ್ಯಗಳಲ್ಲಿ ಒಂದಾಗಿದೆ ಮತ್ತು ಅದನ್ನು ಪಾಲಿಸದ ಯಾರಾದರೂ ಅಪರಾಧಿ. ಕಡ್ಡಾಯ ಕರ್ತವ್ಯಗಳಲ್ಲಿ ಒಂದು 'ರೋಜಾ' ಯಾವುದೇ ಆರೋಗ್ಯವಂತ ಪುರುಷ ಅಥವಾ ಮಹಿಳೆ 'ರೋಜಾ' ಆಚರಿಸದಿದ್ದರೆ, ಅವರು ದೊಡ್ಡ ಅಪರಾಧಿಯಾಗುತ್ತಾರೆ. ಭಾರತದ ಪ್ರಸಿದ್ಧ ಕ್ರಿಕೆಟ್ ವ್ಯಕ್ತಿತ್ವ, ಮೊಹಮ್ಮದ್ ಶಮಿ ಪಂದ್ಯದ ಸಮಯದಲ್ಲಿ ನೀರು ಅಥವಾ ಇತರ ಪಾನೀಯವನ್ನು ಸೇವಿಸಿದ್ದಾರೆ ಎಂದು ಅವರು ಹೇಳಿದರು.