ಮುಂಬೈ: ಭಾರತ ಕ್ರಿಕೆಟ್ ತಂಡದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಸುಖಾ ಸುಮ್ಮನೇ ವಿವಾದವೊಂದರಲ್ಲಿ ಸಿಲುಕಿಕೊಂಡಿದ್ದಾರೆ. ಅದೂ ತಾವು ಮಾಡದ ತಪ್ಪಿಗೆ.
ಹಾರ್ದಿಕ್ ಪಾಂಡ್ಯ ಹೆಸರಿನ ಟ್ವಿಟರ್ ಖಾತೆಯಲ್ಲಿ ಮಾಡಲಾಗಿರುವ ಟ್ವೀಟ್ ನಲ್ಲಿ ಸಂವಿಧಾನ ಶಿಲ್ಪಿ ಡಾ. ಬಿಆರ್ ಅಂಬೇಡ್ಕರ್ ಗೆ ಅವಮಾನ ಮಾಡಲಾಗಿದೆ ಎಂದು ಡಿಆರ್ ಮೇಘವಾಲ್ ಎಂಬವರು ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದಾರೆ.
ಆದರೆ ವಿಚಾರಣೆಯ ನಂತರ ಇದು ಹಾರ್ದಿಕ್ ಅವರ ಅಧಿಕೃತ ಟ್ವಿಟರ್ ಖಾತೆಯಲ್ಲ ಎಂಬುದು ತಿಳಿದುಬಂದಿದೆ. ಹಾಗಿದ್ದರೂ ಈ ಬಗ್ಗೆ ಹಾರ್ದಿಕ್ ವಿರುದ್ಧ ಎಫ್ ಐಆರ್ ದಾಖಲಿಸಲು ಜೋಧ್ ಪುರದ ನ್ಯಾಯಾಲಯ ಆದೇಶಿಸಿದೆ.
@hardikpandya7 ಎಂಬುದು ಪಾಂಡ್ಯ ಅಧಿಕೃತ ಟ್ವಿಟರ್ ಖಾತೆಯಾಗಿದೆ. ಆದರೆ ಈ ಟ್ವೀಟ್ @sirhardik3777 ಎಂಬ ಖಾತೆಯಿಂದ ಬಂದಿತ್ತು. ನ್ಯಾಯಾಲಯದ ದೂರಿನ ಪ್ರತಿ ಕೈಸೇರಿದ ಮೇಲೆ ವಿಚಾರಣೆ ನಡೆಸುವುದಾಗಿ ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ