Publish Date: Thu, 22 Mar 2018 (08:59 IST)
Updated Date: Thu, 22 Mar 2018 (09:01 IST)
ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಇನ್ ಸ್ಟಾಗ್ರಾಂನಲ್ಲಿ ಆಗಾಗ ತಮ್ಮ ವೈಯಕ್ತಿಕ ಫೋಟೋಗಳನ್ನು ಹಾಕಿಕೊಳ್ಳುತ್ತಾರೆ. ಅವರ ಇನ್ ಸ್ಟಾಗ್ರಾಂ ಪೇಜ್ ಗೆ ಕೋಟಿ 98 ಲಕ್ಷ ಹಿಂಬಾಲಕರಿದ್ದಾರೆ.
ವಿಷಯ ಅದಲ್ಲಾ. ಕೊಹ್ಲಿ ತಮ್ಮ ಇನ್ ಸ್ಟಾಗ್ರಾಂ ಪುಟದಲ್ಲಿ ಹಾಕಿಕೊಳ್ಳುವ ಒಂದೇ ಒಂದು ಫೋಟೋಗೆ ಎಷ್ಟು ದುಡ್ಡು ಜೇಬಿಗಿಳಿಸುತ್ತಾರಾ ಗೊತ್ತಾ?
ಬರೋಬ್ಬರಿ 3.2 ಕೋಟಿ ರೂ. ಸಂಭಾವನೆ ಪಡೆಯುತ್ತಾರಂತೆ ಕೊಹ್ಲಿ. ವಿರಾಟ್ ಕೊಹ್ಲಿಗೆ ಈಗಾಗಲೇ ಜಾಹೀರಾತುಗಳ ರಾಯಭಾರಿಯಾಗಿ ಕೋಟ್ಯಂತರ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ. ಈಗ ಒಂದೇ ಒಂದು ಇನ್ ಸ್ಟಾಗ್ರಾಂ ಪೋಸ್ಟ್ ಗೂ ವಿರಾಟ್ ಕೊಹ್ಲಿ ಇಷ್ಟೊಂ ಸಂಭಾವನೆ ಪಡೆಯುತ್ತಿರುವ ಕಾರಣವೇ ಅವರಿಂದು ಸಂಭಾವನೆ ವಿಚಾರದಲ್ಲಿ ದೇಶದ ನಂ.1 ಕ್ರೀಡಾ ಪಟುವಾಗಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ