Publish Date: Fri, 03 Sep 2021 (17:35 IST)
Updated Date: Fri, 03 Sep 2021 (17:37 IST)
ಲಂಡನ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಇಂದು ಮೊದಲ ಅವಧಿಯಲ್ಲಿ ನೀಡಿದ ಆಘಾತದಿಂದ ಚೇತರಿಸಿಕೊಂಡ ಇಂಗ್ಲೆಂಡ್ ಹೋರಾಟ ನಡೆಸುತ್ತಿದೆ.
ದ್ವಿತೀಯ ದಿನದ ಊಟದ ವಿರಾಮದ ವೇಳೆಗೆ ಇಂಗ್ಲೆಂಡ್ 5 ವಿಕೆಟ್ ನಷ್ಟಕ್ಕೆ 139 ರನ್ ಗಳಿಸಿದೆ. 6 ನೇ ವಿಕೆಟ್ ಗೆ ಜೊತೆಯಾಗಿರುವ ಒಲಿ ಪಾಪ್ ಮತ್ತು ಜಾನಿ ಬೇರ್ ಸ್ಟೋ 77 ರನ್ ಗಳ ಜೊತೆಯಾಟವಾಡಿದ್ದಾರೆ.
ಇದು ಕುಸಿತದಿಂದ ಇಂಗ್ಲೆಂಡ್ ಚೇತರಿಸಿಕೊಳ್ಳುವಂತೆ ಮಾಡಿದೆ. ಇನ್ನೂ ಇಂಗ್ಲೆಂಡ್ ಭಾರತದ ಮೊದಲ ಇನಿಂಗ್ಸ್ ಮೊತ್ತ ದಾಟಲು 52 ರನ್ ಗಳಿಸಿದರೆ ಸಾಕು. ಅತ್ತ ಭಾರತಕ್ಕೆ ಇಂದು ಉಮೇಶ್ ಯಾದವ್ ಬಿಟ್ಟರೆ ಉಳಿದವರು ಪರಿಣಾಮಕಾರಿಯಾಗದೇ ಇದ್ದಿದ್ದು ಹೊಡೆತ ನೀಡಿದೆ.