ಮುಂಬೈ: ಭಾರತೀಯ ಕ್ರಿಕೆಟ್ ತಂಡ ಇತ್ತೀಚೆಗೆ ತೋರುತ್ತಿರುವ ಪ್ರದರ್ಶನಕ್ಕೆ ಎ ತಂಡದ ಕೋಚ್ ಆಗಿದ್ದ ರಾಹುಲ್ ದ್ರಾವಿಡ್ ಕೊಡುಗೆ ಅಪಾರವಿದೆ. ಈ ಬಗ್ಗೆ ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ಮೈಕಲ್ ವಾನ್ ವಾಲ್ ದ್ರಾವಿಡ್ ರನ್ನು ಹೊಗಳಿದ್ದಾರೆ.
ಭಾರತ ಎ ತಂಡದಿಂದ ಬಂದ ಎಲ್ಲಾ ಕ್ರಿಕೆಟಿಗರೂ ರಾಷ್ಟ್ರೀಯ ತಂಡದಲ್ಲಿ ಮೊದಲ ಪಂದ್ಯದಿಂದಲೇ ಗಮನ ಸೆಳೆಯುವ ಪ್ರದರ್ಶನ ನೀಡುತ್ತಿದ್ದಾರೆ. ಈ ಆಟಗಾರರ ಬೆಳವಣಿಗೆಗೆ ಐಪಿಎಲ್ ಒಂದೇ ಕಾರಣವಲ್ಲ. ಎ ತಂಡದ ಕೋಚ್ ಆಗಿದ್ದ ರಾಹುಲ್ ದ್ರಾವಿಡ್ ಯುವ ಆಟಗಾರರ ಮನಸ್ಸಿನಲ್ಲಿ ಸಕಾರಾತ್ಮಕ ಭಾವನೆ ಬೆಳೆಸಿ, ಒತ್ತಡ ನಿಭಾಯಿಸುವುದನ್ನು ಕಲಿಸಿದ್ದು ಪ್ರಮುಖ ಕಾರಣ ಎಂದು ಮೈಕಲ್ ವಾನ್ ಹೊಗಳಿದ್ದಾರೆ.
ಇಂದು ಟೀಂ ಇಂಡಿಯಾದಲ್ಲಿ ಮಿಂಚುತ್ತಿರುವ ಹಾರ್ದಿಕ್ ಪಾಂಡ್ಯ, ಶಬ್ನಂ ಗಿಲ್, ಕೆಎಲ್ ರಾಹುಲ್, ಶ್ರೇಯಸ್ ಐಯರ್, ಶ್ರಾದ್ಧೂಲ್ ಠಾಕೂರ್, ಇಶಾನ್ ಕಿಶನ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ ಕೃಷ್ಣ ಸೇರಿದಂತೆ ಬಹುತೇಕ ಕ್ರಿಕೆಟಿಗರು ದ್ರಾವಿಡ್ ಗರಡಿಯಲ್ಲಿ ಪಳಗಿದವರು.