Publish Date: Wed, 30 Dec 2020 (09:08 IST)
Updated Date: Wed, 30 Dec 2020 (09:10 IST)
ಮೆಲ್ಬೋರ್ನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮುಂದಿನ ಟೆಸ್ಟ್ ಗೆ ಭಾರತ ತಂಡದಲ್ಲಿ ಕೆಲವು ಬದಲಾವಣೆಗಳಾಗುವ ಸಾಧ‍್ಯತೆಗಳಿವೆ.
ಅದರಲ್ಲೂ ಕಳೆದ ಎರಡು ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡಿರುವ ಮಯಾಂಕ್ ಅಗರ್ವಾಲ್ ಹೊರಹೋಗುವುದು ಬಹುತೇಕ ಖಚಿತವಾಗಿದೆ. ರೋಹಿತ್ ಶರ್ಮಾಗಾಗಿ ಮಯಾಂಕ್ ಹೊರ ನಡೆಯುವುದು ಅನಿವಾರ್ಯವಾಗಲಿದೆ. ಇನ್ನು, ಕೆಎಲ್ ರಾಹುಲ್ ರನ್ನು ಆಡಿಸದೇ ಇರುವುದಕ್ಕೆ ಟೀಂ ಇಂಡಿಯಾ ಮ್ಯಾನೇಜ್ ಮೆಂಟ್ ತೀವ್ರ ಟೀಕೆ ಎದುರಿಸುತ್ತಿದೆ. ಹೀಗಾಗಿ ಕಳೆಗುಂದಿರುವ ಹನುಮ ವಿಹಾರಿ ಬದಲಿಗೆ ಮುಂದಿನ ಟೆಸ್ಟ್ ಗೆ ರಾಹುಲ್ ಮಧ‍್ಯಮ ಕ್ರಮಾಂಕಕ್ಕೆ ಆಯ್ಕೆಯಾದರೂ ಅಚ್ಚರಿಯಿಲ್ಲ.