Publish Date: Sun, 27 Dec 2020 (09:37 IST)
Updated Date: Sun, 27 Dec 2020 (09:40 IST)
ಮೆಲ್ಬೋರ್ನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ದ್ವಿತೀಯ ಟೆಸ್ಟ್ ಪಂದ್ಯಕ್ಕೂ ಅನುಭವಿ ಕೆಎಲ್ ರಾಹುಲ್ ಗೆ ಅವಕಾಶ ನೀಡದ ಟೀಂ ಇಂಡಿಯಾ ಮ್ಯಾನೇಜ್ ಮೆಂಟ್ ವಿರುದ್ಧ ಅಭಿಮಾನಿಗಳ ಆಕ್ರೋಶ ಹೆಚ್ಚಾಗಿದೆ.
ದ್ವಿತೀಯ ಟೆಸ್ಟ್ ನಲ್ಲೂ ಭಾರತದ ಬ್ಯಾಟಿಂಗ್ ನದ್ದು ಅದೇ ಕತೆ. ಮೊದಲ ಟೆಸ್ಟ್ ನಲ್ಲಿ ಶೂನ್ಯ ಸಂಪಾದಿಸಿದ್ದಾಗಲೇ ಪೃಥ್ವಿ ಶಾ ಔಟಾಗಿ ರನ್ ಗಳಿಸುವ ಮೊದಲೇ ವಿಕೆಟ್ ಕಳೆದುಕೊಂಡು ಸಂಕಷ್ಟದಿಂದ ಇನಿಂಗ್ಸ್ ಆರಂಭಿಸಿದ್ದ ಭಾರತ ಈ ಟೆಸ್ಟ್ ನಲ್ಲೂ ಅದೇ ಕತೆ ಮುಂದುವರಿಸಿದೆ. ಈ ಬಾರಿ ಮಯಾಂಕ್ ಅಗರ್ವಾಲ್ ಶೂನ್ಯ ಸಂಪಾದಿಸಿ ಆರಂಭದಲ್ಲೇ ತಂಡಕ್ಕೆ ಆಘಾತ ನೀಡಿದರು. ಹೀಗಾಗಿ ಇದೆಲ್ಲಾ ನೋಡಿದ ಮೇಲಾದರೂ ಮುಂದಿನ ಟೆಸ್ಟ್ ಗೆ ಮಯಾಂಕ್ ಬದಲಿಗೆ ಕೆಎಲ್ ಗೆ ಅವಕಾಶ ನೀಡಲಿ ಎಂದು ನೆಟ್ಟಿಗರು ಆಗ್ರಹಿಸಿದ್ದಾರೆ.