Publish Date: Thu, 12 Aug 2021 (11:43 IST)
Updated Date: Thu, 12 Aug 2021 (09:44 IST)
ಲಾರ್ಡ್ಸ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಆರಂಭಕ್ಕೂ ಮುನ್ನ ಅಭ್ಯಾಸದ ವೇಳೆ ತಲೆಗೆ ಪೆಟ್ಟುಮಾಡಿಕೊಂಡಿದ್ದ ಆರಂಭಿಕ ಮಯಾಂಕ್ ಅಗರ್ವಾಲ್ ಈಗ ಚೇತರಿಸಿಕೊಂಡಿದ್ದು, ಬ್ಯಾಟಿಂಗ್ ಅಭ್ಯಾಸ ನಡೆಸಿದ್ದಾರೆ.
ಅವರು ಫಿಟ್ ಆಗಿರುವ ಹಿನ್ನಲೆಯಲ್ಲಿ ದ್ವಿತೀಯ ಟೆಸ್ಟ್ ಗೆ ತಂಡದಲ್ಲಿ ಸ್ಥಾನ ಪಡೆದರೂ ಅಚ್ಚರಿಯಿಲ್ಲ. ಒಂದು ವೇಳೆ ಮಯಾಂಕ್ ತಂಡದೊಳಕ್ಕೆ ಬಂದರೆ ಅವರೇ ಓಪನರ್ ಆಗಿ ಕಣಕ್ಕಿಳಿಯುವ ಸಾಧ‍್ಯತೆಯಿದೆ.
ಒಂದು ವೇಳೆ ಮಯಾಂಕ್ ಓಪನಿಂಗ್ ಮಾಡಿದರೆ ಮೊದಲ ಟೆಸ್ಟ್ ನಲ್ಲಿ ಓಪನರ್ ಆಗಿ ತಂಡಕ್ಕೆ ಆಧಾರ ಸ್ತಂಬವಾಗಿದ್ದ ಕೆಎಲ್ ರಾಹುಲ್ ಮಧ್ಯಮ ಕ್ರಮಾಂಕದಲ್ಲಿ ಆಡಬಹುದು. ಹೀಗಾದಲ್ಲಿ ಪೂಜಾರ ಅಥವಾ ರೆಹಾನೆ ತಂಡದಿಂದ ಹೊರಗುಳಿಯುವ ಅನಿವಾರ್ಯತೆ ಎದುರಾಗಲಿದೆ.