Publish Date: Thu, 20 Apr 2023 (06:30 IST)
Updated Date: Thu, 20 Apr 2023 (06:52 IST)
ಜೈಪುರ: ಐಪಿಎಲ್ 2023 ರಲ್ಲಿ ಗೆಲುವಿನ ನಾಗಲೋಟ ಹಾಕುತ್ತಿದ್ದ ರಾಜಸ್ಥಾನ್ ರಾಯಲ್ಸ್ ತಂಡವನ್ನು ಲಕ್ನೋ ಸೂಪರ್ ಜೈಂಟ್ಸ್ 10 ರನ್ ಗಳಿಂದ ಸೋಲಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 154 ರನ್ ಗಳಿಸಿತು. ಕೆಎಲ್ ರಾಹುಲ್ 39, ಮೇಯರ್ಸ್ 51 ರನ್ ಗಳಿಸಿದರು.
ಈ ಮೊತ್ತವನ್ನು ರಾಜಸ್ಥಾನ್ ಸುಲಭವಾಗಿ ಬೆನ್ನಟ್ಟಬಹುದು ಎಂಬುದೇ ಎಲ್ಲರ ನಿರೀಕ್ಷೆಯಾಗಿತ್ತು. ಅದಕ್ಕೆ ತಕ್ಕಂತೆ ಯಶಸ್ವಿ ಜೈಸ್ವಾಲ್ (44), ಜೋಸ್ ಬಟ್ಲರ್ (40) ಉತ್ತಮ ಆರಂಭ ಒದಗಿಸಿದರು. ಆದರೆ ಎರಡನೇ ವಿಕೆಟ್ ಬಿದ್ದ ಬಳಿಕ ರಾಜಸ್ಥಾನ್ ಕುಸಿತ ಆರಂಭವಾಯಿತು. ಆವೇಶ್ ಖಾನ್ 3, ಮಾರ್ಕಸ್ ಸ್ಟಾಯ್ನಿಸ್ 2 ವಿಕೆಟ್ ಕಬಳಿಸಿದರು.ಲಕ್ನೋ ಬೌಲರ್ ಗಳ ಬಿಗುವಿನ ದಾಳಿಯಿಂದಾಗಿ ರಾಜಸ್ಥಾನ್ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 144 ರನ್ ಗಳಿಸಲಷ್ಟೇ ಶಕ್ತವಾಯಿತು. ಇದರೊಂದಿಗೆ ಲಕ್ನೋ ಈ ಕೂಟದಲ್ಲಿ ಇದುವರೆಗೆ ನಡೆದ ಪಂದ್ಯಗಳ ಪೈಕಿ ಕನಿಷ್ಠ ಮೊತ್ತ ಡಿಫೆಂಡ್ ಮಾಡಿದ ದಾಖಲೆ ಮಾಡಿತು.