Publish Date: Wed, 19 Apr 2023 (18:31 IST)
Updated Date: Wed, 19 Apr 2023 (18:32 IST)
ಮುಂಬೈ: ಭಾರತ-ಆಸ್ಟ್ರೇಲಿಯಾ ನಡುವಿನ ಕ್ರಿಕೆಟ್ ಸರಣಿ ನಡುವೆ ಟೀಂ ಇಂಡಿಯಾ ಕ್ರಿಕೆಟಿಗ ಮೊಹಮ್ಮದ್ ಸಿರಾಜ್ ರನ್ನು ಬುಕಿಗಳು ಸಂಪರ್ಕಿಸಿದ್ದರು ಎಂಬ ವಿಚಾರ ಬಹಿರಂಗವಾಗಿದೆ.
ಮ್ಯಾಚ್ ಫಿಕ್ಸಿಂಗ್ ಎಂಬ ಭೂತ ಆಗಾಗ ಕ್ರಿಕೆಟಿಗರನ್ನು ಕಾಡುತ್ತಲೇ ಇರುತ್ತದೆ. ಭಾರತ ಮತ್ತು ಆಸ್ಟ್ರೇಲಿಯಾ ಸರಣಿ ಎಂದರೆ ಬೇಡಿಕೆ ಹೆಚ್ಚು. ಈ ಸರಣಿಯ ಇನ್ ಸೈಡ್ ಮಾಹಿತಿ ಪಡೆಯುವುದಕ್ಕೆ ಬುಕಿಗಳು ಮೊಹಮ್ಮದ್ ಸಿರಾಜ್ ರನ್ನು ಸಂಪರ್ಕಿಸಿದ್ದರಂತೆ.
ಆದರೆ ಮೊಹಮ್ಮದ್ ಸಿರಾಜ್ ತಕ್ಷಣವೇ ಬಿಸಿಸಿಐನ ಭ್ರಷ್ಟಾಚಾರ ತಡೆ ಪಡೆಯ ಗಮನಕ್ಕೆ ಈ ವಿಚಾರ ತಂದಿದ್ದರು ಎನ್ನಲಾಗಿದೆ. ಅವರ ಪ್ರಾಮಾಣಿಕತೆಗೆ ಮೆಚ್ಚುಗೆ ವ್ಯಕ್ತವಾಗಿದೆ.