Publish Date: Wed, 19 Apr 2023 (06:30 IST)
Updated Date: Wed, 19 Apr 2023 (06:54 IST)
ಹೈದರಾಬಾದ್: ಐಪಿಎಲ್ 2023 ರಲ್ಲಿ ನಿಧಾನವಾಗಿ ಮುಂಬೈ ಇಂಡಿಯನ್ಸ್ ಟ್ರ್ಯಾಕ್ ಗೆ ಮರಳುತ್ತಿದೆ. ಇದೀಗ ಸತತ ಮೂರನೇ ಗೆಲುವು ದಾಖಲಿಸಿದೆ.
ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು 14 ರನ್ ಗಳಿಂದ ಮುಂಬೈ ಮಣಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 192 ರನ್ ಗಳಿಸಿದರು. ಗ್ರೀನ್ ಅಜೇಯ 64, ಇಶಾನ್ ಕಿಶನ್ 38, ತಿಲಕ್ ವರ್ಮ 37 ರನ್ ಗಳಿಸಿದರು.
ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಹೈದರಾಬಾದ್ 19.5 ಓವರ್ ಗಳಲ್ಲಿ 178 ರನ್ ಗಳಿಗೆ ಆಲೌಟ್ ಆಯಿತು. ಮಯಾಂಕ್ ಅಗರ್ವಾಲ್ 48 ರನ್ ಗಳಿಸಿದರು. ಮುಂಬೈ ಪರ ಪಿಯೂಷ್ ಚಾವ್ಲಾ, ರಿಲೇ ಮೆರಿಡಿತ್, ಜೇಸನ್ ತಲಾ 2 ವಿಕೆಟ್ ಕಬಳಿಸಿದರು. ಅರ್ಜುನ್ ತೆಂಡುಲ್ಕರ್ ಐಪಿಎಲ್ ನ ಮೊದಲ ವಿಕೆಟ್ ಸಂಪಾದಿಸಿದರು.