Publish Date: Thu, 16 Nov 2017 (17:16 IST)
Updated Date: Thu, 16 Nov 2017 (17:18 IST)
ಕೋಲ್ಕೊತ್ತಾ: ಟೀಂ ಇಂಡಿಯಾಕ್ಕೆ ಇಂದು ಅದೇನು ಕೆಟ್ಟ ಗಳಿಗೆಯೋ. ಆರಂಭದಲ್ಲೇ ಮಳೆ ಶನಿಯಂತೆ ಕಾಡುತ್ತಿದ್ದ. ಪಂದ್ಯ ಹಾಗೂ ಹೀಗೂ ಅರ್ಧ ದಿನ ಕಳೆದ ಮೇಲೆ ಆರಂಭವಾದರೂ, ಲಂಕಾದ ಲಕ್ಮಲ್ ಕಮಾಲ್ ಗೆ ಜುಜುಬಿ 17 ರನ್ ಗೆ ಪ್ರಮುಖ ಮೂರು ವಿಕೆಟ್ ಕಿತ್ತಿದ್ದಾರೆ.
ಈ ಒದ್ದೆ ಪಿಚ್ ನಲ್ಲಿ ಬ್ಯಾಟಿಂಗ್ ನಡೆಸುವುದು ಕಷ್ಟವೇ. ತಾವು ಟಾಸ್ ಗೆದ್ದಿದ್ದರೂ ಬೌಲಿಂಗ್ ಆಯ್ಕೆ ಮಾಡಿಕೊಳ್ಳುತ್ತಿದ್ದೆ ಎಂದು ನಾಯಕ ಕೊಹ್ಲಿ ಮೊದಲೇ ಹೇಳಿದ್ದರು. ಆದರೆ ಭಾರತದ ಬಲಿಷ್ಠ ಬ್ಯಾಟಿಂಗ್ ಶಕ್ತಿಯನ್ನು ಲಂಕಾದ ಲಕ್ಮಲ್ 6 ಓವರ್ ಗಳಲ್ಲಿ ಒಂದೇ ಒಂದು ರನ್ ನೀಡದೇ 3 ವಿಕೆಟ್ ಕಿತ್ತಿದ್ದು ಮಾತ್ರ ಅತಿಥೇಯರಿಗೆ ಎದುರಿಸಲಾಗದ ಆಘಾತ ನೀಡಿತ್ತು.
ಅದರಲ್ಲೂ ಮೊದಲ ಎಸೆತದಲ್ಲಿ ರಾಹುಲ್ ರನ್ನು ಶೂನ್ಯಕ್ಕೆ ಔಟ್ ಮಾಡಿದ ಲಕ್ಮಲ್ ವಿಶ್ವವನ್ನೇ ನಡುಗಿಸಿದ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿಯನ್ನೂ ಸೊನ್ನೆ ಸುತ್ತುವಂತೆ ಮಾಡಿದ್ದು ನಿಜಕ್ಕೂ ಆತನ ಕಮಾಲ್ ಎನ್ನದೇ ವಿಧಿಯಿಲ್ಲ.
ದಿನವಿಡೀ ಹನಿ ಮಳೆಯಿಂದಾಗಿ 12 ಓವರ್ ಗಳಷ್ಟೇ ಆಟ ನಡೆಯಿತು. ಆದರೆ ಈ ಕಿರು ಅವಧಿಯಲ್ಲಿ ಭಾರತದ ಮೇಲೆ ಸಂಕಷ್ಟದ ಮೋಡವೇ ಕವಿದಂತಾಯಿತು. ಇದೀಗ 8 ರನ್ ಗಳಿಸಿರುವ ಚೇತೇಶ್ವರ ಪೂಜಾರ ಮತ್ತು ಇನ್ನೂ ಖಾತೆ ತೆರೆಯದ ಅಜಿಂಕ್ಯಾ ರೆಹಾನೆ ಕ್ರೀಸ್ ನಲ್ಲಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ