ಮುಂಬೈ: ಇಂದಿಗೆ ಸರಿಯಾಗಿ ನಾಲ್ಕು ವರ್ಷ ಹಿಂದೆ ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್ ತಮ್ಮ ಅಭಿಮಾನಿಗಳ ಕಣ್ಣಲ್ಲಿ ನೀರು ಜಿನುಗುವಂತೆ ಮಾಡಿದ್ದರು. ಇಂದು ಅವರ ಕ್ರಿಕೆಟ್ ಗೆ ನಿವೃತ್ತಿಯಾದ ದಿನ.
ನವಂಬರ್ 16, 2013 ರಂದು ಮುಂಬೈಯಲ್ಲಿ ಸಚಿನ್ ಕೊನೆಯ ಪಂದ್ಯವಾಡಿದ್ದರು. ವಿಶೇಷವೆಂದರೆ ನಿನ್ನೆ ನವಂಬರ್ 15 ರಂದು 1989 ರಂದು ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದರು.
ಇದೇ ಕಾರಣಕ್ಕೆ ಸಚಿನ್ ತೆಂಡುಲ್ಕರ್ ರನ್ನು ಇಂದು ವಿಶ್ವವೇ ನೆನೆಸಿಕೊಳ್ಳುತ್ತಿದೆ. ಆವತ್ತು ಸಚಿನ್ ಕೊನೆಯ ಪಂದ್ಯವನ್ನು ಕೋಟ್ಯಂತರ ಮಂದಿ ಇನ್ನಿಲ್ಲವೆಂಬಂತೆ ಕಣ್ತುಂಬಿಕೊಂಡಿದ್ದರು. ಸಚಿನ್ ಕೊನೆಯ ಬಾರಿಗೆ ಮೈದಾನಕ್ಕಿಳಿಯುವ ದೃಶ್ಯವನ್ನು ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದ ಕ್ಯಾಮರಾಮೆನ್ ಗೆ ಬೆಸ್ಟ್ ಫೋಟೋಗ್ರಫಿ ಅವಾರ್ಡ್ ಕೂಡಾ ಸಿಕ್ಕಿತ್ತು.
ಅಂದು ಸಚಿನ್ ಮಾಡಿದ್ದ ವಿದಾಯ ಭಾಷಣವನ್ನು ಯಾವುದೇ ಅಧ್ಯಕ್ಷೀಯ ಭಾಷಣಕ್ಕೂ ಕಡಿಮೆಯಿಲ್ಲದಂತೆ ಜನ ಆಸಕ್ತಿಯಿಂದ ಕೇಳಿದ್ದರು. ಅದರ ನಂತರ ಅದೆಷ್ಟೋ ಜನ ಕ್ರಿಕೆಟ್ ಮೇಲಿನ ಆಸಕ್ತಿಯನ್ನೇ ಕಳೆದುಕೊಂಡರು. ಇಂತಹದ್ದೊಂದು ಕ್ರಿಕೆಟ್ ಯುಗಾಂತ್ಯವಾಗಿ ಇಂದಿಗೆ ನಾಲ್ಕು ವರ್ಷ ಕಳೆದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ