Publish Date: Tue, 30 Jun 2020 (10:12 IST)
Updated Date: Tue, 30 Jun 2020 (10:14 IST)
ಕೊಲೊಂಬೋ: 2011 ರಲ್ಲಿ ಭಾರತ ಗೆದ್ದಿದ್ದ ಏಕದಿನ ವಿಶ್ವಕಪ್ ಫೈನಲ್ ಪಂದ್ಯ ಫಿಕ್ಸ್ ಆಗಿತ್ತು ಎಂಬ ಶ್ರೀಲಂಕಾದ ಮಾಜಿ ಸಚಿವರ ಆರೋಪದ ಹಿನ್ನಲೆಯಲ್ಲಿ ಆ ಪಂದ್ಯವನ್ನು ತನಿಖೆಗೊಳಪಡಿಸಲು ಲಂಕಾ ಮುಂದಾಗಿದೆ.
ಫೈನಲ್ ಪಂದ್ಯ ಫಿಕ್ಸಿಂಗ್ ನಲ್ಲಿ ಲಂಕಾ ತಂಡದ ಕೆಲವು ಆಟಗಾರರು ಭಾಗಿಯಾಗಿದ್ದರು ಎಂದು ಲಂಕಾದ ಅಂದಿನ ಕ್ರೀಡಾ ಸಚಿವರಾಗಿದ್ದ ಅಲುತಗಮಗೆ ಆರೋಪಿಸಿದ್ದರು.
ಇದರ ಬೆನ್ನಲ್ಲೇ ಇದೀಗ ಪ್ರಕರಣವನ್ನು ಪೊಲೀಸರ ಸ್ವತಂತ್ರ ತನಿಖಾ ದಳಕ್ಕೆ ವಹಿಸಿದ್ದು, ಕ್ರಿಮಿನಲ್ ವಿಚಾರಣೆ ನಡೆಯಲಿದೆ ಎಂದು ಕ್ರೀಡಾ ಸಚಿವಾಲಯ ಹೇಳಿಕೆ ನೀಡಿದೆ. ಭಾರತ ಮತ್ತು ಲಂಕಾ ತಂಡ ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದಿದ್ದ ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗಿತ್ತು.