ದುಬೈ: ಬಾಂಗ್ಲಾದೇಶ ಕ್ರಿಕೆಟಿಗ ಶಕೀಬ್ ಅಲ್ ಹಸನ್ ಮ್ಯಾಚ್ ಫಿಕ್ಸಿಂಗ್ ಆರೋಪದಲ್ಲಿ 2 ವರ್ಷ ಕ್ರಿಕೆಟ್ ನಿಂದ ನಿಷೇಧಕ್ಕೊಳಗಾದ ಬೆನ್ನಲ್ಲೇ ಅವರು ಬುಕಿ ಜತೆ ನಡೆಸಿದ್ದ ಮಾತುಕತೆಗಳು ಬಹಿರಂಗವಾಗುತ್ತಿದೆ.
2018 ರ ಐಪಿಎಲ್ ಕೂಟದಲ್ಲೂ ಫಿಕ್ಸಿಂಗ್ ನಡೆಸಲು ಬುಕಿ ಶಕೀಬ್ ರನ್ನು ಸಂಪರ್ಕಿಸಿದ್ದ. ಇವರಿಬ್ಬರ ನಡುವೆ ವ್ಯಾಟ್ಸಪ್ ಸಂದೇಶ ರವಾನೆಯಾಗಿತ್ತು. ಆದರೆ ಶಕೀಬ್ ಬುಕಿ ಹೇಳಿದ್ದನ್ನು ಒಪ್ಪಿಕೊಂಡಿದ್ದಕ್ಕೆ ದಾಖಲೆಯಿಲ್ಲ.
ಅಷ್ಟೇ ಅಲ್ಲದೆ 2018 ರ ಬಾಂಗ್ಲಾ-ಶ್ರೀಲಂಕಾ-ಜಿಂಬಾಬ್ವೆ ನಡುವಿನ ತ್ರಿಕೋನ ಏಕದಿನ ಸರಣಿಯಲ್ಲೂ ಬುಕಿಗಳು ಶಕೀಬ್ ರನ್ನು ಸಂಪರ್ಕಿಸಿದ್ದಕ್ಕೆ ದಾಖಲೆ ಸಿಕ್ಕಿದೆ. ಹೀಗಾಗಿ ಇವೆರಡೂ ಕಾರಣಕ್ಕೆ ಶಕೀಬ್ ಐಸಿಸಿಯ ಭ್ರಷ್ಟಾಚಾರ ನಿಯಂತ್ರಣ ಖಾಯಿದೆಯ ಸ್ಪಷ್ಟ ಉಲ್ಲಂಘನೆ ಮಾಡಿರುವುದು ಪಕ್ಕಾ ಆಗಿದೆ. ಹೀಗಾಗಿ 2020 ರ ಅಕ್ಟೋಬರ್ ವರೆಗೆ ಶಕೀಬ್ ಗೆ ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ನಿಷೇಧ ಶಿಕ್ಷೆ ಜಾರಿಯಲ್ಲಿರಲಿದೆ.
ಬಾಂಗ್ಲಾದೇಶ ಕ್ರಿಕೆಟ್ ಗೆ ಹಲವು ದಾಖಲೆಗಳನ್ನು, ಖ್ಯಾತಿಯನ್ನು ತಂದುಕೊಟ್ಟ ಯಶಸ್ವೀ ಕ್ರಿಕೆಟಿಗ ಶಕೀಬ್ ಮೇಲೆ ಇಂತಹದ್ದೊಂದು ಆಪಾದನೆ ಬಂದಿರುವುದು ಬಾಂಗ್ಲಾ ಕ್ರಿಕೆಟ್ ಗೇ ಒಂದು ರೀತಿಯ ಕಪ್ಪು ಚುಕ್ಕೆಯಾಗಲಿದೆ.