Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಮುಂಬೈ: ಟೀಂ ಇಂಡಿಯಾ ಟೆಸ್ಟ್ ನಾಯಕತ್ವ ಹುದ್ದೆ ಈಗ ಖಾಲಿಯಾಗಿದೆ. ಈ ಸ್ಥಾನಕ್ಕೆ ಹೊಸದಾಗಿ ಯಾರು ನೇಮಕವಾಗಲಿದ್ದಾರೆ ಎಂಬ ಚರ್ಚೆಗಳು ನಡೆದಿರುವ ಬೆನ್ನಲ್ಲೇ ವೇಗಿ ಜಸ್ಪ್ರೀತ್ ಬುಮ್ರಾ ನಾಯಕತ್ವಕ್ಕೆ ಸಿದ್ಧ ಎಂದಿದ್ದಾರೆ.
ಒಂದು ವೇಳೆ ತನಗೆ ಟೆಸ್ಟ್ ತಂಡದ ನಾಯಕತ್ವ ನೀಡಿದರೆ ಅದನ್ನು ನಿಭಾಯಿಸಲು ಸಿದ್ಧ ಎಂದು ಜಸ್ಪ್ರೀತ್ ಬುಮ್ರಾ ಹೇಳಿದ್ದಾರೆ. ಬುಮ್ರಾರನ್ನು ದ.ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೆ ಉಪನಾಯಕರಾಗಿ ನೇಮಿಸಲಾಗಿತ್ತು.
ಜವಾಬ್ಧಾರಿ ನಿಭಾಯಿಸುವುದು, ಇನ್ನೊಬ್ಬರಿಗೆ ನೆರವಾಗುವುದು ಯಾವತ್ತೂ ನನಗೆ ಇಷ್ಟವಾದ ಕೆಲಸ. ಒಂದು ವೇಳೆ ಅವಕಾಶ ಕೊಟ್ಟರೆ ಟೀಂ ಇಂಡಿಯಾ ನಾಯಕತ್ವ ವಹಿಸಲೂ ಸಿದ್ಧ. ಅದು ಗೌರವದ ವಿಚಾರ ಎಂದುಕೊಂಡಿದ್ದೇನೆ ಎಂದಿದ್ದಾರೆ ಬುಮ್ರಾ. ಆ ಮೂಲಕ ನಾಯಕತ್ವದ ರೇಸ್ ನಲ್ಲಿ ತಾವೂ ಇರುವುದಾಗಿ ಸುಳಿವು ನೀಡಿದ್ದಾರೆ.