ಮುಂಬೈ: ಟೀಂ ಇಂಡಿಯಾ ವಿಕೆಟ್ ಕೀಪರ್ ರಿಷಬ್ ಪಂತ್ ಬ್ಯಾಟಿಂಗ್ ನಲ್ಲಿ ವೈಫಲ್ಯ ಅನುಭವಿಸಿದ್ದ ಕಾರಣಕ್ಕೆ ಅವರನ್ನು ತಂಡದಿಂದ ಹೊರಗಿಡಬೇಕು ಎಂಬ ಒತ್ತಾಯ ಕೇಳಿಬಂದಿತ್ತು.
ಇದರ ನಡುವೆ ದ.ಆಫ್ರಿಕಾ ವಿರುದ್ಧ ಆರಂಭಿಕರಾಗಿ ಕಣಕ್ಕಿಳಿದಿದ್ದ ಕೆಎಲ್ ರಾಹುಲ್ ಕೂಡಾ ಒಂದೇ ಪಂದ್ಯದಲ್ಲಿ ಮಿಂಚಿದ್ದಾರೆ. ಉಳಿದೆಲ್ಲಾ ಪಂದ್ಯದಲ್ಲೂ ಉತ್ತಮವಾಗಿ ಆರಂಭಿಸಿದ್ದರೂ ಬೇಗನೇ ವಿಕೆಟ್ ಒಪ್ಪಿಸಿದ್ದರು.
ಹೀಗಾಗಿ ರಾಹುಲ್ ರನ್ನು ವಿಕೆಟ್ ಕೀಪರ್ ಆಗಿ ಬಳಸಿಕೊಳ್ಳಬೇಕು ಮತ್ತು ಅವರನ್ನು ಮಧ್ಯಮ ಕ್ರಮಾಂಕದಲ್ಲಿ ಆಡಿಸಬೇಕು ಎಂಬ ಒತ್ತಾಯ ಕೆಲವು ಮಾಜಿ ಕ್ರಿಕೆಟಿಗರಿಂದ ಕೇಳಿಬಂದಿದೆ. ಏಕದಿನ ಪಂದ್ಯಗಳಲ್ಲಿ ವಿಕೆಟ್ ಕೀಪರ್ ಆಗಿ ಅನುಭವವಿರುವ ರಾಹುಲ್ ರನ್ನು ಟೆಸ್ಟ್ ನಲ್ಲಿಯೂ ವಿಕೆಟ್ ಕೀಪಿಂಗ್ ಗಿಳಿಸಿದರೆ ಮತ್ತೊಬ್ಬ ಎಕ್ಸ್ ಟ್ರಾ ಬ್ಯಾಟಿಗನನ್ನು ತಂಡಕ್ಕೆ ಆಯ್ಕೆ ಮಾಡಬಹುದು ಎಂಬುದು ಮಾಜಿಗಳ ಲೆಕ್ಕಾಚಾರ.