Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಪರ್ಲ್: ಇದೇ ಮೊದಲ ಬಾರಿಗೆ ಟೀಂ ಇಂಡಿಯಾ ಸೀಮಿತ ಓವರ್ ಪಂದ್ಯಗಳಿಗೆ ನಾಯಕತ್ವ ವಹಿಸಿರುವ ಕೆಎಲ್ ರಾಹುಲ್ ಇಂದಿನಿಂದ ತಮ್ಮ ಕರ್ತವ್ಯ ಶುರು ಮಾಡಿದ್ದಾರೆ.
ಬುಧವಾರದಿಂದ ಆರಂಭವಾಗಲಿರುವ ದ.ಆಫ್ರಿಕಾ ವಿರುದ್ಧದ ಮೊದಲ ಏಕದಿನಕ್ಕೆ ಮೊದಲು ತಂಡದೊಂದಿಗೆ ಸಭೆ ನಡೆಸಿರುವ ಕೆಎಲ್ ರಾಹುಲ್ ಕೆಲವು ಟಿಪ್ಸ್ ನೀಡಿದ್ದಾರೆ. ಈ ವೇಳೆ ಇತರ ಆಟಗಾರರೂ ಕ್ಯಾಪ್ಟನ್ ಮಾತುಗಳನ್ನು ಗಮನವಿಟ್ಟು ಆಲಿಸಿದ್ದಾರೆ!
ರಾಹುಲ್ ಗೆ ಕೋಚ್ ರಾಹುಲ್ ದ್ರಾವಿಡ್ ಕೂಡಾ ಸಾಥ್ ನೀಡಿದ್ದಾರೆ. ಖಾಯಂ ನಾಯಕ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ರಾಹುಲ್ ತಂಡವನ್ನು ಮುನ್ನಡೆಸಲಿದ್ದಾರೆ.