Select Your Language

Notifications

webdunia
webdunia
webdunia
webdunia

ಜಸ್‌ಪ್ರೀತ್‌ ಬೂಮ್ರಾ ದಾಳಿಗೆ ತತ್ತರಿಸಿದ ಬಾಂಗ್ಲಾ: ಭಾರತಕ್ಕೆ ಭಾರೀ ಮುನ್ನಡೆ

India Crickeat

Sampriya

ಚೆನ್ನೈ , ಶುಕ್ರವಾರ, 20 ಸೆಪ್ಟಂಬರ್ 2024 (14:46 IST)
Photo Courtesy X
ಚೆನ್ನೈ: ಇಲ್ಲಿನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮೊದಲ ಟೆಸ್ಟ್‌ನ ಎರಡನೇ ದಿನವಾದ ಶುಕ್ರವಾರ ಭಾರತ ಮೇಲುಗೈ ಸಾಧಿಸಿದೆ.  

ಭಾರತದ ಮೊದಲ ಇನಿಂಗ್ಸ್‌ನಲ್ಲಿ ಗಳಿಸಿದ್ದ 376 ರನ್‌ಗೆ ಉತ್ತರವಾಗಿ ಬಾಂಗ್ಲಾದೇಶ ಟೀ ವಿರಾಮದ ಹೊತ್ತಿಗೆ 36.5 ಓವರ್‌ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 112 ರನ್ ಗಳಿಸಿದ್ದು, ಸಂಕಷ್ಟದಲ್ಲಿದೆ. ಬಾಂಗ್ಲಾ ತಂಡವು ಇನ್ನೂ ಎರಡು ವಿಕೆಟ್ ಮಾತ್ರ ಬಾಕಿ ಉಳಿದಿರುವಂತೆಯೇ 264 ರನ್‌ಗಳ ಹಿನ್ನಡೆಯಲ್ಲಿದ್ದು, ಫಾಲೋಆನ್‌ ಭೀತಿಯಲ್ಲಿದೆ.

40 ರನ್ ಗಳಿಸುವಷ್ಟರಲ್ಲಿ ಬಾಂಗ್ಲಾದೇಶ ತಂಡ ಐದು ವಿಕೆಟ್ ಕಳೆದುಕೊಂಡಿತ್ತು. ಭಾರತೀಯ ವೇಗಿಗಳಾದ ಜಸ್‌ಪ್ರೀತ್ ಬೂಮ್ರಾ, ಆಕಾಶ್ ದೀಪ್ ಮತ್ತು ಮೊಹಮ್ಮದ್ ಸಿರಾಜ್ ಬಾಂಗ್ಲಾದೇಶಕ್ಕೆ ಆರಂಭದಲ್ಲೇ ಬಲವಾದ ಪೆಟ್ಟು ಕೊಟ್ಟರು. ಬೂಮ್ರಾ ಮೂರು ಮತ್ತು ಆಕಾಶ್ ದೀಪ್ ಹಾಗೂ ರವಿಂದ್ರ ಜಡೇಜ ತಲಾ ಎರಡು ಮತ್ತು ಮೊಹಮ್ಮದ್ ಸಿರಾಜ್ ಒಂದು ವಿಕೆಟ್ ಕಬಳಿಸಿದರು.

ಈ ಮೊದಲು ಭಾರತ ತಂಡ 91.2 ಓವರ್‌ಗಳಲ್ಲಿ 376 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು. ರವೀಂದ್ರ ಜಡೇಜ ಹಾಗೂ ರವಿಚಂದ್ರನ್ ಅಶ್ವಿನ್ ಏಳನೇ ವಿಕೆಟ್‌ಗೆ 199 ರನ್‌ಗಳ ಜೊತೆಯಾಟ ಕಟ್ಟಿದರು. 86 ರನ್ ಗಳಿಸಿದ ಜಡೇಜ ಶತಕ ವಂಚಿತರಾದರು. ಮೊದಲ ದಿನದಾಟದಲ್ಲಿ ಟೆಸ್ಟ್ ಕ್ರಿಕೆಟ್‌ನ ಆರನೇ ಶತಕ ಸಾಧನೆ ಮಾಡಿದ ಅಶ್ವಿನ್ 133 ಎಸೆತಗಳಲ್ಲಿ 113 ರನ್ ಗಳಿಸಿ ಔಟ್ ಆದರು.

Share this Story:

Follow Webdunia kannada

ಮುಂದಿನ ಸುದ್ದಿ

ಮೊಹಮ್ಮದ್ ಸಿರಾಜ್ ಗೆ ಮೈದಾನದಲ್ಲೇ ಕ್ಷಮೆ ಕೇಳಿದ ರಿಷಬ್ ಪಂತ್: ಅಂತಹದ್ದೇನಾಯ್ತು