Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಹಿಂದೂಗಳ ಮೇಲೆ ದಾಳಿ ಮಾಡಿದ ಬಾಂಗ್ಲಾದೇಶ ಜೊತೆ ಕ್ರಿಕೆಟ್ ಸರಣಿ ಯಾಕೆ

ಹಿಂದೂಗಳ ಮೇಲೆ ದಾಳಿ ಮಾಡಿದ ಬಾಂಗ್ಲಾದೇಶ ಜೊತೆ ಕ್ರಿಕೆಟ್ ಸರಣಿ ಯಾಕೆ

Sampriya

ನವದೆಹಲಿ , ಮಂಗಳವಾರ, 17 ಸೆಪ್ಟಂಬರ್ 2024 (18:25 IST)
Photo Courtesy X
ನವದೆಹಲಿ: ಬಾಂಗ್ಲಾದೇಶದಲ್ಲಿ ಅರಾಜಕತೆ ಸೃಷ್ಟಿಯಾದ ಕೇವಲ ಒಂದು ತಿಂಗಳ ನಂತರ ಭಾರತವು ನೆರೆಯ ದೇಶವನ್ನು ಟೆಸ್ಟ್ ಮತ್ತು ಟಿ20 ಸರಣಿಗೆ ಇದೇ 19 ರಿಂದ ಆತಿಥ್ಯ ವಹಿಸಲು ಸಿದ್ಧವಾಗಿದೆ. ಆದರೆ, ಬಾಂಗ್ಲಾದೇಶದಲ್ಲಿ ಹಿಂದೂಗಳ ವಿರುದ್ಧ ನಡೆಯುತ್ತಿರುವ ಹಿಂಸಾಚಾರದ ನಡುವೆ ಆತಿಥ್ಯ ವಹಿಸುವ ಭಾರತದ ನಿರ್ಧಾರಕ್ಕೆ ಟೀಕೆ ವ್ಯಕ್ತವಾಗುತ್ತಿದೆ.

ಬಾಂಗ್ಲಾದೇಶ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್‌ ಸರಣಿ ಮತ್ತು ಮೂರು ಪಂದ್ಯಗಳ ಟಿ20 ಸರಣಿ ಗುರುವಾರದಿಂದ ಆರಂಭವಾಗಲಿದೆ. ಮೊದಲ ಟೆಸ್ಟ್‌ ಪಂದ್ಯ ಚೆನ್ನೈನಲ್ಲಿ ನಡೆಯಲಿದ್ದು, ಉಭಯ ತಂಡಗಳು ಭರ್ಜರಿ ತಾಲೀಮು ನಡೆಸುತ್ತಿದೆ. ಈ ಮಧ್ಯೆ #BoycottBangladeshCricket ಅಭಿಯಾನ ಜೋರಾಗಿ ನಡೆಯುತ್ತಿದೆ.

ಅಕ್ಟೋಬರ್ 6 ರಂದು ಗ್ವಾಲಿಯರ್‌ನ ಮಾಧವರಾವ್ ಸಿಂಧಿಯಾ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಟಿ20 ಪಂದ್ಯವನ್ನು ಆಯೋಜಿಸಲಾಗಿದೆ. ಆ ಪಂದ್ಯದ ವೇಳೆ ಹಿಂದೂ ಮಹಾಸಭಾ ಪ್ರತಿಭಟನೆಯ ಬೆದರಿಕೆ ಹಾಕಿದೆ.

ಹಿಂದೂ ದೇವಾಲಯಗಳ ಧ್ವಂಸ ಮತ್ತು ಹಿಂದೂಗಳ ವಿರುದ್ಧದ ಹಿಂಸಾಚಾರವನ್ನು ಉಲ್ಲೇಖಿಸಿ ಬಲಪಂಥೀಯ ಗುಂಪು ಪಂದ್ಯವನ್ನು ವಿರೋಧಿಸುತ್ತದೆ ಎಂದು ಮಹಾಸಭಾ ಉಪಾಧ್ಯಕ್ಷ ಡಾ.ಜೈವೀರ್ ಭಾರದ್ವಾಜ್ ಹೇಳಿದ್ದಾರೆ.

ಅಶಾಂತಿ ತಡೆಯಲು ಪ್ರಧಾನಿ ನರೇಂದ್ರ ಮೋದಿ ಮಧ್ಯಸ್ಥಿಕೆ ವಹಿಸಿ ಪಂದ್ಯವನ್ನು ರದ್ದುಗೊಳಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಹೀಗಾಗಿ, ಕೊನೆಯ ಕ್ಷಣದಲ್ಲಿ ಪಂದ್ಯದ ಸ್ಥಳವನ್ನು ಬದಲಾಯಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
#BoycottBangladeshCricket ಅಭಿಯಾನ ಟ್ರೆಂಡಿಂಗ್‌ನಲ್ಲಿದ್ದು, ಸರಣಿಯನ್ನು ರದ್ದುಗೊಳಿಸುವಂತೆ ನೆಟ್ಟಿಗರು ಬಿಸಿಸಿಐಯನ್ನು ಒತ್ತಾಯಿಸಿದ್ದಾರೆ.  

ಕಳೆದ ತಿಂಗಳು ಸಾವಿರಾರು ಹಿಂದೂಗಳು ಢಾಕಾ ಮತ್ತು ಚಟ್ಟೋಗ್ರಾಮ್‌ನಲ್ಲಿ ರಕ್ಷಣೆಗಾಗಿ ಮೊರೆಯಿಟ್ಟರು. ಬಾಂಗ್ಲಾದೇಶದಲ್ಲಿ ಹಸೀನಾ ನೇತೃತ್ವದ ಸರ್ಕಾರದ ಪತನದ ನಂತರ 48 ಜಿಲ್ಲೆಗಳಲ್ಲಿ 278 ಸ್ಥಳಗಳಲ್ಲಿ ಹಿಂದೂ ಸಮುದಾಯ ಮತ್ತು ಧಾರ್ಮಿಕ ಕೇಂದ್ರಗಳ ಮೇಲೆ ದಾಳಿ ನಡೆಸಲಾಗಿತ್ತುರ್ಷದ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಅವರು ಉನ್ನತ ಮಟ್ಟದ ಕ್ರಿಕೆಟ್‌ಗೆ ಮರಳಿದ ನಂತರ ಪ್ರಭಾವ ಬೀರಿದ್ದಾರೆ, ಜೂನ್‌ನಲ್ಲಿ ಭಾರತದ T20 ವಿಶ್ವಕಪ್ ಗೆಲುವಿನಲ್ಲಿ ಅವರ ಪಾತ್ರವನ್ನು ಒಳಗೊಂಡಂತೆ.

Share this Story:

Follow Webdunia kannada

ಮುಂದಿನ ಸುದ್ದಿ

ಟೀಂ ಇಂಡಿಯಾ ಸೋಲಿಸುತ್ತೇವೆ ಎನ್ನುತ್ತಿರುವ ಬಾಂಗ್ಲಾದೇಶಿಯರಿಗೆ ಗುನ್ನ ಕೊಟ್ಟ ರೋಹಿತ್ ಶರ್ಮಾ