ನವದೆಹಲಿ: ವಿರಾಟ್ ಕೊಹ್ಲಿ ನಂತರ ಟೀಂ ಇಂಡಿಯಾ ಕ್ರಿಕೆಟ್ ನ ಚುಕ್ಕಾಣಿ ಯಾರು ಹಿಡಿಯಬೇಕು? ಹಿರಿಯ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಈ ಮಹತ್ವದ ಸ್ಥಾನಕ್ಕೆ ಒಬ್ಬ ಕ್ರಿಕೆಟಿಗನ ಹೆಸರು ಸೂಚಿಸಿದ್ದಾರೆ.
ಅವರೇ ರವಿಚಂದ್ರನ್ ಅಶ್ವಿನ್. ಸದ್ಯಕ್ಕೆ ಸೆಹ್ವಾಗ್ ಮೆಂಟರ್ ಆಗಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ ಅಶ್ವಿನ್ ನಾಯಕ. ಸೆಹ್ವಾಗ್ ಒತ್ತಾಸೆಯಿಂದಲೇ ಅಶ್ವಿನ್ ಗೆ ನಾಯಕತ್ವ ವಹಿಸಲಾಗಿದೆ.
ಇದೀಗ ಟೀಂ ಇಂಡಿಯಾಕ್ಕೂ ಕೊಹ್ಲಿ ನಂತರ ಅಶ್ವಿನ್ ನಾಯಕನ ಸ್ಥಾನಕ್ಕೆ ಸೂಕ್ತ ಎಂದು ಸೆಹ್ವಾಗ್ ಹೇಳಿದ್ದಾರೆ. ತಾನು ಬೌಲರ್ ಗಳು ನಾಯಕನಾಗುವುದನ್ನು ಇಷ್ಟಪಡುವುದಾಗಿ ಹೇಳಿದ್ದಾರೆ. ಅವರಲ್ಲಿರುವ ನಾಯಕತ್ವದ ಗುಣದಿಂದಾಗಿ ಸೆಹ್ವಾಗ್ ಈ ಪ್ರಶಂಸೆ ಕೊಟ್ಟಿದ್ದಾರಂತೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.