ವಿಶಾಖಪಟ್ಟಣಂ: ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡುತ್ತಿರುವ ಟೀಂ ಇಂಡಿಯಾ ಇತ್ತೀಚೆಗಿನ ವರದಿ ಬಂದಾಗ ಭೋಜನ ವಿರಾಮದ ನಂತರ 3 ವಿಕೆಟ್ ನಷ್ಟಕ್ಕೆ 196 ರನ್ ಗಳಿಸಿದೆ.
ಯಂಗ್ ಬ್ಯಾಟಿಗ ಯಶಸ್ವಿ ಜೈಸ್ವಾಲ್ ಶತಕ ಸಿಡಿಸಿ ಮಿಂಚಿದ್ದಾರೆ. ಇತ್ತೀಚೆಗಿನ ವರದಿ ಬಂದಾಗ ಒಟ್ಟು 168 ಎಸೆತ ಎದುರಿಸಿದ ಅವರು 3 ಸಿಕ್ಸರ್ ಗಳೊಂದಿಗೆ 117 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಈ ಶತಕದ ಮೂಲಕ ದೇಶ ಮತ್ತು ವಿದೇಶದಲ್ಲಿ 23 ವರ್ಷದೊಳಗಿನ ಎಳೆಯ ವಸ್ಸಿನಲ್ಲಿ ಶತಕ ಸಿಡಿಸಿದ ಭಾರತೀಯ ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದರು. ಅವರಿಗೆ ಸಾಥ್ ನೀಡುತ್ತಿದ್ದ ಶ್ರೇಯಸ್ ಅಯ್ಯರ್ ಇದೀಗಷ್ಟೇ 27 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
ಶತಕ ಗಳಿಸಬೇಕು ಎಂದಿದ್ದ ದ್ರಾವಿಡ್
ಮೊದಲ ಟೆಸ್ಟ್ ಪಂದ್ಯದ ಸಂದರ್ಭದಲ್ಲಿ ಕೋಚ್ ರಾಹುಲ್ ದ್ರಾವಿಡ್ ನಮ್ಮಲ್ಲೂ ಬ್ಯಾಟಿಗರು ಶತಕದ ಇನಿಂಗ್ಸ್ ಆಡಬೇಕು ಎಂದು ಬಯಕೆ ವ್ಯಕ್ತಪಡಿಸಿದ್ದರು. ಅಂದರೆ ದೊಡ್ಡ ಇನಿಂಗ್ಸ್ ಆಡಿದರೆ ಮಾತ್ರ ಇಂಗ್ಲೆಂಡ್ ವಿರುದ್ಧ ಸವಾಲೊಡ್ಡಲು ಸಾಧ‍್ಯ ಎಂಬರ್ಥದಲ್ಲಿ ಈ ರೀತಿ ಹೇಳಿದ್ದರು. ಜೈಸ್ವಾಲ್ ಈಗ ಅದನ್ನು ನಿಜ ಮಾಡಿದ್ದಾರೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಟೀಂ ಇಂಡಿಯಾ
ಇದಕ್ಕೆ ಮೊದಲು ಟಾಸ್ ಗೆದ್ದ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತ್ತು. ಆದರೆ ರೋಹಿತ್ ಶರ್ಮಾ ಮತ್ತೊಮ್ಮೆ ವಿಫಲರಾಗಿದ್ದು ಕೇವಲ 14 ರನ್ ಗಳಿಗೆ ವಿಕೆಟ್ ಒಪ್ಪಿಸಿದರು. ಆದರೆ ಬಳಿಕ ಜೊತೆಯಾದ ಯಶಸ್ವಿ ಜೈಸ್ವಾಲ್-ಶುಬ್ಮನ್ ಗಿಲ್ ಜೋಡಿ ಮತ್ತೆ 40 ರನ್ ಒಟ್ಟುಗೂಡಿಸಿದ ಬಳಿಕ ಗಿಲ್ 34 ರನ್ ಗಳಿಗೆ ಔಟಾಗಿ ನಿರಾಸೆ ಅನುಭವಿಸಿದರು. ಈ ಪೈಕಿ ರೋಹಿತ್ ವಿಕೆಟ್ ಶೊಯೇಬ್ ಬಾಶಿರ್ ಪಾಲಾದರೆ ಗಿಲ್ ವಿಕೆಟ್ ನ್ನು ಜೇಮ್ಸ್ ಆಂಡರ್ಸನ್ ಉಡಾಯಿಸಿದರು. ಇದು ಐದನೇ ಬಾರಿಗೆ ಆಂಡರ್ಸನ್ ಗೆ ಗಿಲ್ ವಿಕೆಟ್ ಒಪ್ಪಿಸಿದ್ದಾರೆ.