Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

IND vs ENG test: ಟಾಸ್ ಗೆದ್ದ ಟೀಂ ಇಂಡಿಯಾ, ರಜತ್ ಪಟಿದಾರ್ ಡೆಬ್ಯೂಟ್

INDvsENG test

Krishnaveni K

ವಿಶಾಖಪಟ್ಟಣಂ , ಶುಕ್ರವಾರ, 2 ಫೆಬ್ರವರಿ 2024 (09:16 IST)
ವಿಶಾಖಪಟ್ಟಣಂ: ಭಾರತ ಮತ್ತು ಇಂಗ್ಲೆಂಡ್ ನಡುವಿನ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದೆ.

ಕಳೆದ ಪಂದ್ಯ ಸೋತಿರುವುದರಿಂದ ಟೀಂ ಇಂಡಿಯಾ ಇಂದು ಗೆಲ್ಲುವ ಒತ್ತಡದಲ್ಲಿದೆ. ಹೀಗಾಗಿ ಟಾಸ್ ಗೆದ್ದಿದ್ದು ಒಳ್ಳೆಯದೇ ಆಯಿತು ಎನ್ನಬಹುದು. ಇಂದಿನ ಪಂದ್ಯದಲ್ಲಿ ಹಲವು ಬದಲಾವಣೆಗಳೊಂದಿಗೆ ಟೀಂ ಇಂಡಿಯಾ ಕಣಕ್ಕಿಳಿದಿದೆ. ಕೆಎಲ್ ರಾಹುಲ್ ಅನುಪಸ್ಥಿತಿಯಲ್ಲಿ ರಜತ್ ಪಟಿದಾರ್ ಗೆ ಚೊಚ್ಚಲ ಅವಕಾಶ ಸಿಕ್ಕಿದೆ. ಗಾಯಗೊಂಡಿರುವ ರವೀಂದ್ರ ಜಡೇಜಾ ಸ್ಥಾನದಲ್ಲಿ ಕುಲದೀಪ್ ಯಾದವ್ ಗೆ ಅವಕಾಶ ಸಿಕ್ಕಿದೆ. ಈ ಪಂದ್ಯದಲ್ಲಿ ನಾಲ್ವರು ಸ್ಪಿನ್ನರ್ ಗಳು ಕಣಕ್ಕಿಳಿಯಬಹುದು ಎಂಬ ನಿರೀಕ್ಷೆಯಿತ್ತು. ಆದರೆ ರೋಹಿತ್ ಮೂವರು ಸ್ಪಿನ್ನರ್, ಇಬ್ಬರು ವೇಗಿಗಳೊಂದಿಗೆ ಕಣಕ್ಕಿಳಿಯುವ ನಿರ್ಧಾರ ಮಾಡಿದ್ದಾರೆ. ಕಳೆದ ಪಂದ್ಯದಲ್ಲಿ ವಿಕೆಟ್ ಕೀಳಲು ವಿಫಲರಾದ ಮೊಹಮ್ಮದ್ ಸಿರಾಜ್ ಗೆ ವಿಶ್ರಾಂತಿ ನೀಡಿ ಮುಕೇಶ್ ಕುಮಾರ್ ಗೆ ಅವಕಾಶ ನೀಡಲಾಗಿದೆ.

ರಜತ್ ಪಟಿದಾರ್ ಡೆಬ್ಯೂಟ್
ಆರ್ ಸಿಬಿ ಪರ ಐಪಿಎಲ್ ಆಡುವ ಮಧ‍್ಯಪ್ರದೇಶ ಮೂಲದ 30 ವರ್ಷದ ರಜತ್ ಪಟಿದಾರ್ ಗೆ ಚೊಚ್ಚಲ ಪಂದ್ಯವಾಡುವ ಅವಕಾಶವಿದೆ. ಅವರಿಗೆ ಮಾಜಿ ಆಟಗಾರ ಜಹೀರ್ ಖಾನ್ ಕ್ಯಾಪ್ ನೀಡಿ ಗೌರವಿಸಿದರು. ಕೆಎಲ್ ರಾಹುಲ್ ಅನುಪಸ್ಥಿತಿಯಲ್ಲಿ ರಜತ್ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗಿಳಿಯುವ ನಿರೀಕ್ಷೆಯಿದೆ.

ಟಾಸ್ ಬಳಿಕ ರೋಹಿತ್ ಹೇಳಿದ್ದೇನು?
ಟಾಸ್ ಬಳಿಕ ಮಾತನಾಡಿದ ರೋಹಿತ್ ಶರ್ಮಾ, ಹೈದರಾಬಾದ್ ನಲ್ಲಿ ನಡೆದಿದ್ದು ಇತಿಹಾಸ. ಅದರಿಂದ ಹೊರಬಂದು ಇಂದು ಉತ್ತಮ ಆಟವಾಡಬೇಕಿದೆ. ಗಾಯಗಳು ಆಟದ ಭಾಗ. ಆದರೆ ಅದನ್ನು ನಮ್ಮ ಬೆಂಚ್ ಸ್ಟ್ರೆಂಗ್ತ್ ಪರೀಕ್ಷಿಸುವ ಸಮಯವೆಂದು ಪರಿಗಣಿಸಬೇಕು ಎಂದಿದ್ದಾರೆ.

ಇಂಗ್ಲೆಂಡ್ ನಲ್ಲೂ ಎರಡು ಬದಲಾವಣೆ
ಅತ್ತ ಇಂಗ್ಲೆಂಡ್ ಕೂಡಾ ಎರಡು ಬದಲಾವಣೆಯೊಂದಿಗೆ ಪಂದ್ಯವಾಡುತ್ತಿದೆ. ಗಾಯಗೊಂಡಿರುವ ಜ್ಯಾಕ್ ಲೀಚ್ ಮತ್ತು ಮಾರ್ಕ್ ವುಡ್ ಬದಲಿಗೆ ಜೇಮ್ಸ್ ಆಂಡರ್ಸನ್ ಮತ್ತು ಶೊಯೇಬ್ ಬಾಶಿರ್ ಗೆ ಅವಕಾಶ ನೀಡಿದೆ. ಉಳಿದಂತೆ ಅದೇ ತಂಡವನ್ನು ಕಣಕ್ಕಿಳಿಸಿದೆ.

ಉಳಿದಂತೆ ತಂಡ ಇಂತಿದೆ: ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಬ್ಮನ್ ಗಿಲ್, ರಜತ್ ಪಟಿದಾರ್, ಶ್ರೇಯಸ್ ಅಯ್ಯರ್, ಕೆಎಸ್ ಭರತ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಕುಲದೀಪ್ ಯಾದವ್, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಮುಕೇಶ್ ಕುಮಾರ್.
ಇಂಗ್ಲೆಂಡ್: ಜ್ಯಾಕ್ ಕ್ರಾವ್ಲೇ, ಬೆನ್ ಡಕೆಟ್, ಒಲಿ ಪಾಪ್, ಜೋ ರೂಟ್, ಜಾನಿ ಬೇರ್ ಸ್ಟೋ, ಬೆನ್ ಸ್ಟೋಕ್ಸ್ (ನಾಯಕ), ಬೆನ್ ಫೋಕ್ಸ್ (ವಿಕೆಟ್ ಕೀಪರ್), ರೆಹಾನ್ ಅಹ್ಮದ್, ಟಾಮ್ ಹಾರ್ಟ್ಲೀ, ಶೊಯೇಬ್ ಬಾಶಿರ್, ಜೇಮ್ಸ್ ಆಂಡರ್ಸನ್.


Share this Story:

Follow Webdunia kannada

ಮುಂದಿನ ಸುದ್ದಿ

ರಸ್ತೆ ಮಧ್ಯೆ ಕಾರು ನಿಲ್ಲಿಸಿ ಅಭಿಮಾನಿಗೆ ಸರ್ಪೈಸ್ ಕೊಟ್ಟ ಸಚಿನ್ ತೆಂಡುಲ್ಕರ್