ಆರಂಭಿಕರಾದ ರೋಹಿತ್ ಶರ್ಮ ಮತ್ತು ಕೆ.ಎಲ್. ರಾಹುಲ್ ಭಾರತಕ್ಕೆ ಉತ್ತಮ ಆರಂಭ ಒದಗಿಸುವ ಮೂಲಕ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಬೌಲರ್ ಗಳ ಬೆವರಿಳಿಸಿದ್ದಾರೆ.
ನಾಟಿಂಗ್ ಹ್ಯಾಂನ ಟ್ರೆಂಟ್ ಬ್ರಿಡ್ಜ್ ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಭೋಜನ ವಿರಾಮದ ವೇಳೆಗೆ ಭಾರತ ಮೊದಲ ಇನಿಂಗ್ಸ್ ನಲ್ಲಿ ಒಂದು ವಿಕೆಟ್ ನಷ್ಟಕ್ಕೆ 97 ರನ್ ಗಳಿಸಿದೆ.
ಇಂಗ್ಲೆಂಡ್ ಮೊದಲ ಇನಿಂಗ್ಸ್ ನಲ್ಲಿ 183 ರನ್
ಗಳ ಅಲ್ಪ ಮೊತ್ತಕ್ಕೆ ಆಲೌಟಾಗಿದ್ದು, ಭಾರತ ಮುನ್ನಡೆ ಪಡೆಯಬೇಕಾದರೆ 86 ರನ್ ಗಳಿಸಬೇಕಾಗಿದೆ.
ಭಾರತದ ಪರ ರೋಹಿತ್ ಶರ್ಮ 104 ಎಸೆತಗಳಲ್ಲಿ 6 ಬೌಂಡರಿ ನೆರವಿನಿಂದ 36 ರನ್ ಗಳಿಸಿದ್ದಾಗ ರಾಬಿನ್ಸನ್ ಎಸೆತದಲ್ಲಿ ಕುರಿಯನ್ ಗೆ ಕ್ಯಾಚ್ ನೀಡಿ ನಿರ್ಗಮಿಸಿದರೆ, ದೀರ್ಘ ಸಮಯದ ನಂತರ ಟೆಸ್ಟ್ ಗೆ ಮರಳಿದ ಕೆಎಲ್ ರಾಹುಲ್ 125 ಎಸೆತಗಳಲ್ಲಿ 6 ಬೌಂಡರಿ ಸೇರಿದ 48 ರನ್ ಗಳಿಸಿದ್ದು ಅರ್ಧಶತಕದತ್ತ ದಾಪುಗಾಲಿರಿಸಿದ್ದಾರೆ.