Publish Date: Thu, 05 Aug 2021 (16:42 IST)
Updated Date: Thu, 05 Aug 2021 (16:43 IST)
ಟೋಕಿಯೋ: ಪುರುಷರ 57 ಕೆ.ಜಿ. ವಿಭಾಗದ ಕುಸ್ತಿ ಫೈನಲ್ ಪಂದ್ಯದಲ್ಲಿ ಭಾರತದ ರವಿಕುಮಾರ್ ದಹಿಯಾ ರಜತ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.
ಫೈನಲ್ ನಲ್ಲಿ ರಷ್ಯಾದ ಜೌರ್ ಉಗೇವ್ ವಿರುದ್ಧ 4-7 ಅಂತರದಿಂದ ಸೋಲು ಅನುಭವಿಸಿದ್ದಾರೆ. ಇದರೊಂದಿಗೆ ಭಾರತಕ್ಕೆ ಮತ್ತೊಂದು ಬೆಳ್ಳಿ ಪದಕ ಸಿಕ್ಕಿದೆ.
ಆರಂಭದಿಂದಲೂ ಉಗೇವ್ ಮೇಲುಗೈ ಹೊಂದಿದ್ದರು. ಆದರೆ ಕೊನೆಯ ಹಂತದಲ್ಲಿ ರವಿ ಎರಡು ಅಂಕ ಗಳಿಸುವಲ್ಲಿ ಯಶಸ್ವಿಯಾದರೂ ಅಷ್ಟರಲ್ಲಾಗಲೇ ಉಗೇವ್ ಸಾಕಷ್ಟು ಮುಂದಿದ್ದರು. ಇದರೊಂದಿಗೆ ಸುಶೀಲ್ ಕುಮಾರ್ ಬಳಿಕ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದ ಕುಸ್ತಿಪಟು ಎಂಬ ಗೌರವಕ್ಕೆ ರವಿಕುಮಾರ್ ಪಾತ್ರರಾದರು.