Publish Date: Fri, 25 Dec 2020 (10:13 IST)
Updated Date: Fri, 25 Dec 2020 (10:15 IST)
ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಸಿಡ್ನಿಯಲ್ಲಿ ನಿಗದಿಯಾಗಿದ್ದ ಮೂರನೇ ಟೆಸ್ಟ್ ಪಂದ್ಯ ಕೊರೋನಾ ಕಾರಣದಿಂದ ಸ್ಥಳಾಂತರವಾಗುವ ಸಾಧ‍್ಯತೆಯಿದೆ.
ಸಿಡ್ನಿಯಲ್ಲಿ ಕೊರೋನಾ ಹಾವಳಿ ಇರುವುದರಿಂದ ಆಟಗಾರರ ಸುರಕ್ಷತೆಯ ದೃಷ್ಟಿಯಿಂದ ಪಂದ್ಯವನ್ನು ಮೆಲ್ಬೋರ್ನ್ ನ್ನು ಬದಲಿ ಮೈದಾನವಾಗಿ ಕ್ರಿಕೆಟ್ ಆಸ್ಟ್ರೇಲಿಯಾ ಘೋಷಿಸಿದೆ. ಹೀಗಾಗಿ ಅಗತ್ಯ ಬಂದರೆ ಮೂರನೇ ಟೆಸ್ಟ್ ಪಂದ್ಯ ದ್ವಿತೀಯ ಟೆಸ್ಟ್ ಪಂದ್ಯ ನಡೆಯಲಿರುವ ಎಂಸಿಜಿ ಕ್ರೀಡಾಂಗಣದಲ್ಲೇ ನಡೆದರೂ ಅಚ್ಚರಿಯಿಲ್ಲ.