ಢಾಕಾ: ಭಾರತ ವಿರುದ್ಧ ಟಿ20 ಮತ್ತು ಟೆಸ್ಟ್ ಸರಣಿ ಆಡಲು ಇನ್ನೇನು ಪ್ರವಾಸ ಆರಂಭಿಸಬೇಕೆನ್ನುವಷ್ಟರಲ್ಲಿ ಬಾಂಗ್ಲಾದೇಶ ಕ್ರಿಕೆಟಿಗರು ದಿಡೀರ್ ಆಗಿ ಪ್ರತಿಭಟನೆಗೆ ಕೂತಿದ್ದರು.
ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕ್ರಿಕೆಟಿಗರು ಪ್ರತಿಭಟನೆ ನಡೆಸಿದ್ದರಿಂದ ಭಾರತ ಪ್ರವಾಸ ನಡೆಯುವುದೇ ಅನುಮಾನ ಎನ್ನುವಂತಾಗಿತ್ತು. ಆದರೆ ಬಿಸಿಬಿ ಕ್ರಿಕೆಟಿಗರ ಬಹುತೇಕ ಬೇಡಿಕೆಗಳನ್ನು ಒಪ್ಪಿಕೊಂಡಿದ್ದರಿಂದ ಪ್ರತಿಭಟನೆ ಕೈ ಬಿಟ್ಟಿದ್ದರು.
ಆದರೆ ಇದೀಗ ಬಿಸಿಬಿ ಅಧ್ಯಕ್ಷ ನಜ್ಮುಲ್ ಹಸನ್ ಕ್ರಿಕೆಟಿಗರ ಮೇಲೆ ಹೊಸದೊಂದು ಆರೋಪ ಮಾಡಿದ್ದಾರೆ. ತಾನು ಕ್ರಿಕೆಟಿಗರ ಬೇಡಿಕೆ ಒಪ್ಪಿಕೊಳ್ಳಲೇಬಾರದಿತ್ತು. ಇವರಿಗೆಲ್ಲಾ ಭಾರತ ಪ್ರವಾಸ ಹಾಳು ಮಾಡುವ ದುರುದ್ದೇಶವಿತ್ತು. ತಮೀಮ್ ಇಕ್ಬಾಲ್ ಕೌಟುಂಬಿಕ ಕಾರಣ ನೀಡಿ ಇಡೀ ಭಾರತ ಪ್ರವಾಸದಿಂದ ಹಿಂದೆ ಸರಿದಿರುವುದೂ ಇದೇ ಕಾರಣಕ್ಕಾಗಿ ಎಂದು ನಜ್ಮುಲ್ ಆರೋಪಿಸಿದ್ದಾರೆ.
ಹಿರಿಯ ಆಟಗಾರನೆನಿಸಿಕೊಂಡಿರುವ ಶಕೀಬ್ ಅಲ್ ಹಸನ್ ಕೂಡಾ ಇದೇ ರೀತಿ ನಡೆದುಕೊಳ್ಳುತ್ತಾರೆಂದರೆ ಯಾರಿಗೆ ನಾಯಕತ್ವ ನೀಡುವುದು ಎಂದು ನಜ್ಮುಲ್ ಅಸಹಾಯಕತೆ ಪ್ರದರ್ಶಿಸಿದ್ದಾರೆ. ಅವರ ಈ ಹೇಳಿಕೆ ಈಗ ಹೊಸದೊಂದು ವಿವಾದ ಸೃಷ್ಟಿಸಿದೆ.