ದುಬೈ: ಮ್ಯಾಚ್ ಫಿಕ್ಸಿಂಗ್ ಕಳಂಕ ಹೊತ್ತ ಬಾಂಗ್ಲಾದೇಶ ಸ್ಟಾರ್ ಕ್ರಿಕೆಟಿಗ ಶಕೀಬ್ ಅಲ್ ಹಸನ್‍ಗೆ ಅಂತರಾಷ್ಟ್ರೀಯ ಕ್ರಿಕೆಟ್ ಸಮಿತಿ 2 ವರ್ಷಗಳ ನಿಷೇಧ ಹೇರಿದೆ.
ಬುಕಿಗಳು ಶಕೀಬ್ ಜತೆ ಹಲವು ಬಾರಿ ವ್ಯಾಟ್ಸಪ್ ಸಂದೇಶ ವಿನಿಮಯ ಮಾಡಿಕೊಂಡಿದ್ದರು ಎಂಬುದು ಬಹಿರಂಗವಾದ ಹಿನ್ನಲೆಯಲ್ಲಿ ಐಸಿಸಿ ಈ ಕ್ರಮ ಕೈಗೊಂಡಿದೆ. ಭಾರತ ಪ್ರವಾಸಕ್ಕೆ ಮೊದಲು ಇದು ಬಾಂಗ್ಲಾದೇಶ ಕ್ರಿಕೆಟ್‍ಗೆ ದೊಡ್ಡ ಹೊಡೆತವಾಗಲಿದೆ.
ಅದಕ್ಕಿಂತಲೂ ಹೆಚ್ಚಾಗಿ ಬಾಂಗ್ಲಾದ ಪ್ರಮುಖ ಆಟಗಾರ ಶಕೀಬ್. ಇದರ ಜತೆಗೆ ಇತ್ತೀಚೆಗಷ್ಟೇ ಬಾಂಗ್ಲಾ ಕ್ರಿಕೆಟ್ ಮಂಡಳಿ ವಿರುದ್ಧ ಕ್ರಿಕೆಟಿಗರು ಮಾಡಿದ ಪ್ರತಿಭಟನೆಯಲ್ಲಿ ಅವರೂ ಪಾಲ್ಗೊಂಡಿದ್ದರು. ಇದೀಗ ಐಪಿಎಲ್ ಸೇರಿದಂತೆ ಪ್ರಮುಖ ಕ್ರಿಕೆಟ್ ಟೂರ್ನಿಗಳ ಸಂದರ್ಭದಲ್ಲಿ ಬುಕಿಗಳ ಜತೆ ನಿರಂತರ ಸಂಪರ್ಕ ಸಾಧಿಸಿ ಸಿಕ್ಕಿಬಿದ್ದಿದ್ದಾರೆ.