ದುಬೈ: ಐಸಿಸಿ ತನ್ನ ಮುಂದಿನ ಎಂಟು ವರ್ಷಗಳ ವೇಳಾಪಟ್ಟಿ ಬಿಡುಗಡೆ ಮಾಡಿದ ಬೆನ್ನಲ್ಲೇ ಪ್ರಮುಖ ಸದಸ್ಯ ರಾಷ್ಟ್ರಗಳಾದ ಭಾರತ, ಆಸ್ಟ್ರೇಲಿಯಾ ಇದಕ್ಕೆ ವಿರೋಧ ವ್ಯಕ್ತಪಡಿಸಿದೆ.
ಮುಂದಿನ ಎಂಟು ವರ್ಷಗಳ ಅವಧಿಯಲ್ಲಿ 6 ವಿಶ್ವಕಪ್ ನಡೆಸುತ್ತಿರುವುದು ಆಸ್ಟ್ರೇಲಿಯಾ ಮತ್ತು ಭಾರತೀಯ ಕ್ರಿಕೆಟ್ ಮಂಡಳಿಯ ಆಕ್ಷೇಪಕ್ಕೆ ಕಾರಣವಾಗಿದೆ. ಈ ರೀತಿ ಅತಿಯಾಗಿ ವಿಶ್ವಕಪ್ ಕೂಟ ಆಯೋಜಿಸುವುದರಿಂದ ಇತರ ಕ್ರಿಕೆಟ್ ಸರಣಿ ನಡುವೆ ಸಮನ್ವಯತೆ ಸಾಧಿಸಲು ಕಷ್ಟವಾಗುತ್ತದೆ ಎಂಬುದು ಈ ಎರಡೂ ರಾಷ್ಟ್ರಗಳ ಮಂಡಳಿಗಳ ಆಕ್ಷೇಪವಾಗಿದೆ.
ಇತರ ಕ್ರಿಕೆಟ್ ಸರಣಿ ಜತೆಗೆ, ಐಪಿಎಲ್, ಬಿಬಿಎಲ್ ನಂತಹ ಟಿ20 ಕ್ರಿಕೆಟ್ ಲೀಗ್ ಗಳು, ದೇಶೀಯ ಕ್ರಿಕೆಟ್ ಪಂದ್ಯಗಳ ವೇಳಾಪಟ್ಟಿ ತಯಾರಿಸಲು ಕಷ್ಟವಾಗುತ್ತದೆ. ಹೀಗಾಗಿ ಈ ಬಗ್ಗೆ ಚರ್ಚೆ ನಡೆಸಬೇಕು ಎಂದು ಈ ರಾಷ್ಟ್ರಗಳು ಒತ್ತಾಯಿಸಿವೆ.