Publish Date: Sun, 04 Sep 2022 (21:04 IST)
Updated Date: Sun, 04 Sep 2022 (21:06 IST)
ದುಬೈ: ಪಾಕಿಸ್ತಾನದ ವಿರುದ್ಧದ ಏಷ್ಯಾ ಕಪ್ ಸೂಪರ್ ಫೋರ್ ಹಂತದ ಪಂದ್ಯದಲ್ಲಿ ಟೀಂ ಇಂಡಿಯಾ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ನಾಯಕ ರೋಹಿತ್ ಶರ್ಮಾ ಮುಂದೆ ಡ್ರೆಸ್ಸಿಂಗ್ ರೂಂನಲ್ಲಿ ಅಸಮಾಧಾನ ತೋಡಿಕೊಂಡ ಘಟನೆ ನಡೆದಿದೆ.
ಈ ಪಂದ್ಯದಲ್ಲಿ ರಿಷಬ್ ಪಂತ್ ರನ್ನು ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಕಳುಹಿಸಲಾಯಿತು. ಆದರೆ ಈ ಕ್ರಮಾಂಕದಲ್ಲಿ ತಾವು ಬ್ಯಾಟಿಂಗ್ ಗೆ ಹೋಗಬೇಕೆಂಬುದು ಹಾರ್ದಿಕ್ ಬಯಕೆಯಾಗಿತ್ತು.
ಹೀಗಾಗಿ ರಿಷಬ್ ರನ್ನು ಮೊದಲು ಕಳುಹಿಸಿದ್ದಕ್ಕೆ ನಾಯಕ ರೋಹಿತ್ ಬಳಿ ಡ್ರೆಸ್ಸಿಂಗ್ ರೂಂನಲ್ಲಿ ವಿವರಣೆ ಕೇಳಿದ್ದಾರೆ. ಬಳಿಕ ರೋಹಿತ್ ಇದಕ್ಕೆ ಸ್ಪಷ್ಟನೆ ನೀಡಿದ ಬಳಿಕ ಹಾರ್ದಿಕ್ ಸಮಾಧಾನಗೊಂಡರು. ಆದರೆ ಬ್ಯಾಟಿಂಗ್ ನಲ್ಲಿ ಕೇವಲ ಶೂನ್ಯಕ್ಕೆ ಔಟಾಗಿ ನಿರಾಸೆ ಮೂಡಿಸಿದರು.