Publish Date: Sun, 04 Sep 2022 (08:40 IST)
Updated Date: Sun, 04 Sep 2022 (08:55 IST)
ದುಬೈ: ಪಾಕಿಸ್ತಾನ ವಿರುದ್ಧದ ಏಷ್ಯಾ ಕಪ್ ಸೂಪರ್ ಫೋರ್ ಪಂದ್ಯಕ್ಕೆ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಸೆಕ್ಸಿ ಶಬ್ಧ ಬಳಲು ಹಿಂದೇಟು ಹಾಕಿದ ಪ್ರಸಂಗ ನಡೆಯಿತು.
ಪಾಕಿಸ್ತಾನ ಬೌಲಿಂಗ್ ಯೂನಿಟ್ ನ್ನು ಸೆಕ್ಸಿ ಎನ್ನಬೇಕಿದ್ದ ದ್ರಾವಿಡ್ ನಾನು ಇಲ್ಲಿ ಆ ಪದ ಬಳಸದೇ ಇರುವುದೇ ಉತ್ತಮ. ಅದು ಎಸ್ ಲೆಟರ್ ನಿಂದ ಆರಂಭವಾಗುವ ನಾಲ್ಕು ಅಕ್ಷರದ ಪದ ಎಂದಾಗ ಅಲ್ಲಿದ್ದವರು ನಗೆಗಡಲಲ್ಲಿ ತೇಲಿದರು.
ಬಳಿಕ ದ್ರಾವಿಡ್ ಗೆ ಕೆಲವು ಪತ್ರಕರ್ತರು ಅದಕ್ಕೆ ಪರ್ಯಾಯವಾಗಿ ಯಾವ ಪದ ಬಳಸಬಹುದು ಎಂದು ಸಲಹೆಯನ್ನೂ ನೀಡಿದರು. ದ್ರಾವಿಡ್ ಕೊನೆಗೂ ಆ ಪದ ಬಳಸಲೇ ಇಲ್ಲ.