Publish Date: Sun, 04 Sep 2022 (08:50 IST)
Updated Date: Sun, 04 Sep 2022 (09:00 IST)
ದುಬೈ: ಪಾಕಿಸ್ತಾನ ವಿರುದ್ಧ ಇಂದು ನಡೆಯಲಿರುವ ಏಷ್ಯಾ ಕಪ್ ಟೂರ್ನಿಯ ಸೂಪರ್ ಫೋರ್ ಪಂದ್ಯಕ್ಕೆ ಮುನ್ನ ಟೀಂ ಇಂಡಿಯಾಗೆ ಶಾಕ್ ಕಾದಿದೆ.
ಆವೇಶ್ ಖಾನ್ ಜ್ವರದಿಂದ ಬಳಲುತ್ತಿದ್ದು, ಇಂದಿನ ಪಂದ್ಯಕ್ಕೆ ಚೇತರಿಸಿಕೊಂಡರೆ ಮಾತ್ರ ಆಡಲು ಸಾಧ್ಯವಾಗುತ್ತದೆ. ಟೀಂ ಇಂಡಿಯಾದ ಪ್ರಮುಖ ವೇಗಿಯಾಗಿರುವುದರಿಂದ ಆವೇಶ್ ಚೇತರಿಸಿಕೊಳ‍್ಳುವುದು ಭಾರತಕ್ಕೆ ಮುಖ್ಯವಾಗಲಿದೆ.
ನಿನ್ನೆ ಸುದ್ದಿಗೋಷ್ಠಿಯಲ್ಲಿ ಆವೇಶ್ ಖಾನ್ ಆರೋಗ್ಯದ ಬಗ್ಗೆ ಮಾಹಿತಿ ನೀಡಿರುವ ದ್ರಾವಿಡ್, ಇಂದಿನ ಪಂದ್ಯದ ವೇಳೆಗೆ ಚೇತರಿಸಿಕೊಳ್ಳುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.