Publish Date: Tue, 26 Oct 2021 (11:54 IST)
Updated Date: Tue, 26 Oct 2021 (09:57 IST)
ದುಬೈ: ಟಿ20 ವಿಶ್ವಕಪ್ ನಲ್ಲಿ ಪಾಕಿಸ್ತಾನದ ವಿರುದ್ಧದ ಮೊದಲ ಪಂದ್ಯದಲ್ಲಿ ಬ್ಯಾಟಿಂಗ್ ಮಾಡುವಾಗ ಭುಜಕ್ಕೆ ಪೆಟ್ಟು ಮಾಡಿಕೊಂಡ ಟೀಂ ಇಂಡಿಯಾ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಮುಂದಿನ ಪಂದ್ಯದಲ್ಲಿ ಆಡುವುದು ಅನುಮಾನವಾಗಿದೆ.
ತಕ್ಷಣವೇ ಪಾಂಡ್ಯರನ್ನು ಸ್ಕ್ಯಾನಿಂಗ್ ಗೊಳಪಡಿಸಲಾಗಿದೆ. ಅವರ ಗಾಯ ಗಂಭೀರವಲ್ಲದೇ ಹೋದರೂ ಮುಂದಿನ ಪಂದ್ಯದಲ್ಲಿ ಆಡುವುದು ಅನುಮಾನವೆನ್ನಲಾಗಿದೆ.
ಭಾರತಕ್ಕೆ ಮುಂದಿನ ಪಂದ್ಯ ಒಂದು ವಾರದ ಬಳಿಕ ನ್ಯೂಜಿಲೆಂಡ್ ವಿರುದ್ಧ. ಈ ಪಂದ್ಯದ ವೇಳೆಗೆ ಪಾಂಡ್ಯ ಚೇತರಿಸಿಕೊಳ್ಳಬಹುದು ಎಂಬ ವಿಶ್ವಾಸವಿದೆ. ಹಾಗಿದ್ದರೂ ಗಾಯದ ಸಮಸ್ಯೆಯಿಂದಾಗಿ ಬೌಲಿಂಗ್ ಮಾಡಲಾಗದೇ ಕೇವಲ ಬ್ಯಾಟ್ಸ್ ಮನ್ ಆಗಿ ಬಳಕೆಯಾಗುವ ಹಾರ್ದಿಕ್ ಬದಲು ಇಶಾನ್ ಗೆ ಸ್ಥಾನ ಸಿಗುವ ಸಾಧ‍್ಯತೆಯಿದೆ.