ದುಬೈ: ಟಿ20 ವಿಶ್ವಕಪ್ ನಲ್ಲಿ ಪಾಕಿಸ್ತಾನ ವಿರುದ್ಧ ಟೀಂ ಇಂಡಿಯಾ ಮೊದಲ ಪಂದ್ಯ ಸೋತಿದ್ದಕ್ಕೆ ಕ್ರಿಕೆಟ್ ಪ್ರಿಯರಿಗೆ ತೀವ್ರ ಬೇಸರವಾಗಿರಬಹುದು. ಆದರೆ ಪಾಕ್ ಕ್ರಿಕೆಟಿಗ ಶೊಯೇಬ್ ಮಲಿಕ್ ಪತ್ನಿ, ಭಾರತದ ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾ ಕೊಹ್ಲಿ ಬಗ್ಗೆ ಬರೆದಿರುವ ಸಂದೇಶ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಪಾಕ್ ವಿರುದ್ಧ ಸೋತ ಬಳಿಕ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕ್ರೀಡಾ ಸ್ಪೂರ್ತಿ ಮರೆಯದೇ ಎದುರಾಳಿ ಆಟಗಾರರ ಬಳಿ ತೆರಳಿ ಹೆಗಲಿಗೆ ಕೈ ಹಾಕಿ ಅಭಿನಂದಿಸಿದ್ದರು.
ಕೊಹ್ಲಿ ಅಭಿನಂದಿಸುವ ಫೋಟೋ ಪ್ರಕಟಿಸಿದ ಸಾನಿಯಾ, ಈ ಕ್ರೀಡಾ ಮನೋಭಾವಕ್ಕೆ ಸಲಾಂ ಎಂದಿದ್ದಾರೆ. ಅಲ್ಲದೆ, ಇದನ್ನೇ ಕ್ರೀಡೆ ಮತ್ತು ಮಾನವೀಯತೆ ಎನ್ನುವುದು ಎಂದು ಹೊಗಳಿದ್ದಾರೆ.