ಬರ್ಮಿಂಗ್ ಹ್ಯಾಮ್: ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಮೊದಲ ಇನಿಂಗ್ಸ್ ನಲ್ಲಿ 416 ರನ್ ಗಳಿಗೆ ಆಲೌಟ್ ಆಗಿದೆ.
ಇಂದು ದ್ವಿತೀಯ ದಿನದಾಟದಲ್ಲಿ ರವೀಂದ್ರ ಜಡೇಜಾ, ಜಸ್ಪ್ರೀತ್ ಬುಮ್ರಾ ಬ್ಯಾಟಿಂಗ್ ನಲ್ಲಿ ಮಿಂಚಿದರೆ ಇಂಗ್ಲೆಂಡ್ ಪರ ಜೇಮ್ಸ್ ಆಂಡರ್ಸನ್ ಐದು ವಿಕೆಟ್ ಪಡೆದು ಮಿಂಚಿದರು. ಜಡೇಜಾ ಇಂದು 104 ರನ್ ಗಳ ಇನಿಂಗ್ಸ್ ಆಡಿದ್ದು, ಇದು ಅವರ ಟೆಸ್ಟ್ ವೃತ್ತಿ ಜೀವನದ 2 ನೇ ಶತಕವಾಗಿದೆ.
ಇನ್ನು, ನಾಯಕ ಜಸ್ಪ್ರೀತ್ ಬುಮ್ರಾ ಕೆಳ ಕ್ರಮಾಂಕದಲ್ಲಿ ಟಿ20 ಶೈಲಿಯಲ್ಲಿ ಬ್ಯಾಟ್ ಬೀಸಿದ್ದು, ಕೇವಲ 16 ಎಸೆತಗಳಿಂದ 31 ರನ್ ಗಳಿಸಿದರು. ಸ್ಟುವರ್ಟ್ ಬ್ರಾಡ್ ಎಸೆದ ಒಂದು ಓವರ್ ನಲ್ಲಿ ಬರೋಬ್ಬರಿ 35 ರನ್ ಚಚ್ಚಿದ್ದು ಅವರ ಬ್ಯಾಟಿಂಗ್ ಅಬ್ಬರಕ್ಕೆ ಸಾಕ್ಷಿಯಾಗಿತ್ತು. ಇದರಿಂದಾಗಿ ಟೀಂ ಇಂಡಿಯಾ 400 ರ ಗಡಿ ತಲುಪಲು ಸಾಧ‍್ಯವಾಯಿತು.
ಇಂಗ್ಲೆಂಡ್ ಪರ ಹಿರಿಯ ವೇಗಿ ಜೇಮ್ಸ್ ಆಂಡರ್ಸನ್ ಭಾರತೀಯರಿಗೆ ಎಂದಿನಂತೆ ಕಾಡಿದರು. ಮತ್ತೊಮ್ಮೆ ಐದು ವಿಕೆಟ್ ಗಳ ಗೊಂಚಲು ಪಡೆದರು. 100 ರನ್ ಗಳೊಳಗೇ 5 ವಿಕೆಟ್ ಕಳೆದುಕೊಂಡು 400 ಪ್ಲಸ್ ರನ್ ಪೇರಿಸಲು ಟೀಂ ಇಂಡಿಯಾದ ಕೆಳ ಕ್ರಮಾಂಕದ ಬ್ಯಾಟಿಗರೇ ಕಾರಣರಾದರು.