Publish Date: Sun, 09 Oct 2022 (10:10 IST)
Updated Date: Sun, 09 Oct 2022 (10:17 IST)
ಮುಂಬೈ: ಭಾರತದ ವಿರುದ್ದ ಸರಣಿ ಆಡಲು ಬಂದಿಳಿದಿರುವ ದ.ಆಫ್ರಿಕಾ ಕ್ರಿಕೆಟಿಗ ಡೇವಿಡ್ ಮಿಲ್ಲರ್ ಮುದ್ದಿನ ಮಗಳನ್ನು ಕಳೆದುಕೊಂಡ ದುಃಖದಲ್ಲಿದ್ದಾರೆ.
ಸ್ವತಃ ಡೇವಿಡ್ ಮಿಲ್ಲರ್ ಸೋಷಿಯಲ್ ಮೀಡಿಯಾ ಮೂಲಕ ಮಗು ತೀರಿಕೊಂಡಿರುವ ಬಗ್ಗೆ ಫೋಟೋ ಸಮೇತ ಪೋಸ್ಟ್ ಮಾಡಿದ್ದಾರೆ. ಆದರೆ ಫೋಟೋದಲ್ಲಿರುವ ಮಿಲ್ಲರ್ ಸ್ವಂತ ಮಗಳೋ ಅಥವಾ ಅವರ ಅಭಿಮಾನಿಯೇ ಎನ್ನುವುದು ಇನ್ನೂ ಖಚಿತವಾಗಿಲ್ಲ.
ಮೂಲಗಳ ಪ್ರಕಾರ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಪುಟಾಣಿ ಹೆಣ್ಣು ಮಗಳು ತೀರಿಕೊಂಡಿದ್ದಾಳೆ. ಆಕೆಯ ಕುರಿತಾಗಿ ಮಿಲ್ಲರ್ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ.
-Edited by Rajesh Patil