Publish Date: Sun, 09 Oct 2022 (10:00 IST)
Updated Date: Sun, 09 Oct 2022 (10:06 IST)
ಬೆಂಗಳೂರು: ಹೊಂಬಾಳೆ ಫಿಲಂಸ್ ನಿರ್ಮಾಣದ ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ ಸಿನಿಮಾ ಹಿಂದಿಯಲ್ಲೂ ತೆರೆ ಕಾಣುತ್ತಿದೆ.
ಇಂದು ಹಿಂದಿ ವರ್ಷನ್ ಟ್ರೈಲರ್ ಬಿಡುಡೆಯಾಗಿದೆ. ಇದಕ್ಕೆ ಉತ್ತಮ ಪ್ರತಿಕ್ರಿಯೆ ಕೇಳಿಬರುತ್ತಿದೆ. ಇದರ ಜೊತೆಗೇ ಹೊಂಬಾಳೆ ಫಿಲಂಸ್ ಹಿಂದಿಯಲ್ಲಿ ಬಿಡುಗಡೆ ದಿನಾಂಕವನ್ನೂ ಘೋಷಿಸಿದೆ.
ಅಕ್ಟೋಬರ್ 14 ರಂದು ಚಿತ್ರ ಹಿಂದಿಯಲ್ಲಿ ತೆರೆ ಕಾಣಲಿದೆ. ಈಗಾಗಲೇ ಮುಂಬೈನಲ್ಲಿ ಕನ್ನಡದಲ್ಲಿ ಸಿನಿಮಾ ಬಿಡುಗಡೆಯಾಗಿ ದಾಖಲೆ ಮಾಡಿತ್ತು. ಈಗ ಬೇಡಿಕೆಯ ಮೇರೆಗೆ ಹಿಂದಿ ಭಾಷೆಗೆ ಡಬ್ ಮಾಡಿ ಬಿಡುಗಡೆ ಮಾಡಲಾಗುತ್ತಿದೆ.
-Edited by Rajesh Patil