Publish Date: Sun, 09 Oct 2022 (09:40 IST)
Updated Date: Sun, 09 Oct 2022 (09:42 IST)
ಬೆಂಗಳೂರು: ಮಲಯಾಳಂ ಸ್ಟಾರ್ ನಟ ಪೃಥ್ವಿರಾಜ್ ಸುಕುಮಾರನ್ ಅಪ್ಪಟ ಕನ್ನಡ ನಾಡಿನ ಸಿನಿಮಾ ಕಾಂತಾರ ಮೆಚ್ಚಿದ್ದಾರೆ.
ಹೊಂಬಾಳೆ ಫಿಲಂಸ್ ನಿರ್ಮಾಣದ ಸಿನಿಮಾ ಮೆಚ್ಚಿಕೊಂಡ ಪೃಥ್ವಿ ರಾಜ್ ರಿಷಬ್ ಶೆಟ್ಟಿ ಕ್ಯಾಮರಾ ಹಿಂದೆ ಮತ್ತು ಮುಂದೆ ಜೀನಿಯಸ್ ಎಂದು ಸಾಬೀತುಪಡಿಸಿದ್ದಾರೆ. ಅದರಲ್ಲೂ ಕೊನೆಯ 20 ನಿಮಿಷವಂತೂ ಅದ್ಭುತ ಎಂದು ಕೊಂಡಾಡಿದ್ದಾರೆ.
ಕಾಂತಾರ ಸಿನಿಮಾವನ್ನು ಮಲಯಾಳಂ ಭಾಷೆಗೂ ಡಬ್ ಮಾಡಿ ಬಿಡುಗಡೆ ಮಾಡಲು ಚಿತ್ರತಂಡ ಚಿಂತನೆ ನಡೆಸಿದೆ. ಹೀಗಾಗಿ ಈ ಹಿಂದೆ ಚಾರ್ಲಿ, ಕೆಜಿಎಫ್ ಸಿನಿಮಾವನ್ನು ಮಲಯಾಳಂನಲ್ಲಿ ಬಿಡುಗಡೆ ಮಾಡಿದ್ದ ಪೃಥ್ವಿ ರಾಜ್ ಈ ಸಿನಿಮಾಗೂ ಕೈಜೋಡಿಸಬಹುದೇ ಎಂಬ ಅನುಮಾನ ಮೂಡಿದೆ.
Edited by Rajesh Patil