Select Your Language

Notifications

webdunia
webdunia
webdunia
webdunia

ಧೋನಿ ಹುಕ್ಕಾ ಸೇದುವ ವಿಡಿಯೋ ವೈರಲ್

Dhoni
ರಾಂಚಿ: ಸಿಎಸ್ ಕೆ ಕ್ಯಾಪ್ಟನ್ ಎಂ.ಎಸ್. ಧೋನಿ ಪ್ರೈವೇಟ್ ಪಾರ್ಟಿಯೊಂದರಲ್ಲಿ ಹುಕ್ಕಾ ಸೇದುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಧೋನಿ ತಮ್ಮ ಫಿಟ್ನೆಸ್, ಸರಳತೆಯ ವ್ಯಕ್ತಿತ್ವಕ್ಕೆ ಹೆಸರುವಾಸಿ. ಆದರೆ ಧೋನಿ ಹುಕ್ಕಾ ಸೇದುವ ಪರಿ ನೋಡಿ ಅಭಿಮಾನಿಗಳು ದಂಗಾಗಿದ್ದಾರೆ. ಪರಿಣಿತರಂತೆ ಹುಕ್ಕಾ ಸೇದುವುದು ನೋಡಿ ಧೋನಿಗೆ ಈ ಚಟವಿದೆ ಎನಿಸುತ್ತದೆ.

ಇತ್ತೀಚೆಗೆ ಧೋನಿ ನ್ಯೂ ಇಯರ್ ಸಂದರ್ಭದಲ್ಲಿ ದುಬೈನಲ್ಲಿ ತಮ್ಮ ಫ್ಯಾಮಿಲಿ, ಫ್ರೆಂಡ್ಸ್ ಜೊತೆ ಪಾರ್ಟಿ ಮಾಡಿದ್ದರು. ಇದು ಆ ವೇಳೆ ತೆಗೆದ ವಿಡಿಯೋನಾ ಎಂದು ಖಚಿತವಾಗಿಲ್ಲ. ಆದರೆ ಅವರ ಹೇರ್ ಸ್ಟೈಲ್ ನೋಡಿದರೆ ಇದು ಇತ್ತೀಚೆಗಿನ ವಿಡಿಯೋ ಎಂಬುದು ಪಕ್ಕಾ ಆಗಿದೆ.

ಧೋನಿಯ ವಿಡಿಯೋ ನೋಡಿದ ಬಳಿಕ ಈ ಹಿಂದೆ ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ಜಾರ್ಜ್ ಬೈಲಿ ಇದೇ ವಿಚಾರದ ಬಗ್ಗೆ ನೀಡಿದ ಹೇಳಿಕೆ ಈಗ ವೈರಲ್ ಆಗಿದೆ. ಧೋನಿಗೆ ಹುಕ್ಕಾ ಸೇದುವುದು ಎಂದರೆ ಬಹಳ ಇಷ್ಟ. ಅವರು ಹುಕ್ಕಾ ಸೇದುತ್ತಾ ಯುವ ಕ್ರಿಕೆಟಿಗರೊಂದಿಗೆ ತಮ್ಮ ಕೊಠಡಿಯಲ್ಲಿ ಕೂತು ಮಾತನಾಡುತ್ತಿರುವುದು ಸಾಮಾನ್ಯವಾಗಿತ್ತು ಎಂದು ಜಾರ್ಜ್ ಬೈಲಿ ಈ ಹಿಂದೆ ಹೇಳಿದ್ದರು. ಧೋನಿಯ ಈ ವಿಡಿಯೋ ನೋಡಿದ ಮೇಲೆ ಜಾರ್ಜ್ ಬೈಲಿ ಹೇಳಿಕೆಗಳು ನಿಜವೆನಿಸುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಟಿ20 ವಿಶ್ವಕಪ್ ಗೆ ರೋಹಿತ್ ಇಲ್ಲ ಎನ್ನವುದರ ಸೂಚನೆಯೇ ಇದು?