ಮುಂಬೈ: ಇನ್ನು ಮುಂದೆ ಜೆರ್ಸಿ ನಂಬರ್ 7 ನ್ನು ಯಾವುದೇ ಕ್ರಿಕೆಟಿಗರೂ ಬಳಸಬಾರದು ಎಂದು ಬಿಸಿಸಿಐ ಟೀಂ ಇಂಡಿಯಾ ಕ್ರಿಕೆಟಿಗರಿಗೆ ಸೂಚನೆ ನೀಡಿದೆಯಂತೆ. ಇದಕ್ಕೆ ಕಾರಣವೇನು ಗೊತ್ತಾ?
ಜೆರ್ಸಿ ನಂ.7 ಎಂದ ತಕ್ಷಣ ನೆನಪಾಗುವುದು ಕೂಲ್ ಕ್ಯಾಪ್ಟನ್ ಎಂ.ಎಸ್.ಧೋನಿ. ಧೋನಿ ಧರಿಸುತ್ತಿದ್ದುದು 7 ಸಂಖ್ಯೆಯ ಸಮವಸ್ತ್ರವನ್ನು. ಧೋನಿ ನಿವೃತ್ತರಾದ ಮೇಲೆ ಯಾರೂ ಈ ಜೆರ್ಸಿಯನ್ನು ಧರಿಸಿರಲಿಲ್ಲ.
ಇದೀಗ ಬಿಸಿಸಿಐ ಧೋನಿ ಧರಿಸುತ್ತಿದ್ದ ಜೆರ್ಸಿ ಸಂಖ್ಯೆಯನ್ನು ಯಾರೂ ಹಾಕಿಕೊಳ್ಳಬೇಡಿ ಎಂದು ಸೂಚನೆ ನೀಡಿದೆಯಂತೆ. ಧೋನಿ ಜೊತೆಗೇ ಈ ಜೆರ್ಸಿ ಸಂಖ್ಯೆಗೂ ನಿವೃತ್ತಿ ನೀಡಲಾಗಿದೆ. ಹೀಗಾಗಿ ಇನ್ನು ಮುಂದೆ ಯಾರೂ 7 ಸಂಖ್ಯೆಯ ಜೆರ್ಸಿ ಹಾಕಿಕೊಳ್ಳಲ್ಲ.
ಈ ಹಿಂದೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಧರಿಸುತ್ತಿದ್ದ 10 ನಂಬರ್ ಜೆರ್ಸಿಗೂ ಬಿಸಿಸಿಐ ಇದೇ ರೀತಿಯ ಗೌರವ ವಿದಾಯ ನೀಡಿತ್ತು. ಹೀಗಾಗಿ ಭಾರತೀಯ ಕ್ರಿಕೆಟ್ ರಂಗದಲ್ಲಿ ಯಾರೂ 10 ನಂಬರ್ ಜೆರ್ಸಿ ಹಾಕಿಕೊಳ್ಳುತ್ತಿಲ್ಲ.