ದುಬೈ: ಯುಎಇನಲ್ಲಿ ಆರಂಭವಾಗಿರುವ ಟಿ20 ವಿಶ್ವಕಪ್ ಕೂಟ ಟೀಂ ಇಂಡಿಯಾ ಪಾಲಿಗೆ ಅನೇಕ ಕಾರಣಗಳಿಗೆ ಮಹತ್ವದ್ದಾಗಿದೆ.
ನಾಯಕರಾಗಿ ವಿರಾಟ್ ಕೊಹ್ಲಿಗೆ ಇದುವರೆಗೆ ಐಸಿಸಿ ಟೂರ್ನಿಯಲ್ಲಿ ಯಶಸ್ಸು ಸಿಕ್ಕಿಲ್ಲ. ಇದು ನಾಯಕರಾಗಿ ಅವರ ಕೊನೆಯ ಟಿ20 ಕೂಟವಾಗಿದೆ. ಹೀಗಾಗಿ ಈ ವಿಶ್ವಕಪ್ ನಲ್ಲಿ ಗೆದ್ದು ವಿದಾಯ ಹೇಳುವ ಕನಸು ಅವರದ್ದಾಗಿದೆ.
ಹೇಗಾದರೂ ಈ ಬಾರಿಯ ವಿಶ್ವಕಪ್ ಗೆದ್ದು ಐಸಿಸಿ ಟೂರ್ನಿಗಳಲ್ಲಿ ಇತ್ತೀಚೆಗಿನ ವರ್ಷಗಳಲ್ಲಿ ಬರ ನೀಗಿಸಲು ಬಿಸಿಸಿಐ ಅದೃಷ್ಟದ ನಾಯಕ ಧೋನಿಯನ್ನು ಮೆಂಟರ್ ಆಗಿ ನೇಮಿಸಿದೆ. ನಾಯಕನಾಗಿ ಧೋನಿ ಸಾಕಷ್ಟು ಯಶಸ್ಸು ಕಂಡರೂ ಮೆಂಟರ್ ಆಗಿ ಇದು ಅವರ ಮೊದಲ ಅಸೈನ್ ಮೆಂಟ್. ಹಾಗಿದ್ದರೂ ತಂಡದ ಆಟಗಾರರ ಜೊತೆ, ನಾಯಕ ಕೊಹ್ಲಿ ಜೊತೆ ಧೋನಿ ಉತ್ತಮ ಸಂವಹನವದೆ. ಯುವ ಆಟಗಾರರಿಗೆ ಧೋನಿ ಆದರ್ಶ. ಅವರ ಸಲಹೆಗಳು ಯಾವತ್ತೂ ಸರಿಯಾಗಿಯೇ ಇರುತ್ತದೆ. ಹೀಗಾಗಿ ಧೋನಿ ಅದೃಷ್ಟ ಮತ್ತು ಅವರ ಚಾಣಕ್ಷ್ಯತನದಿಂದ ಪ್ರಶಸ್ತಿ ಗೆಲ್ಲಲಿ ಎನ್ನುವುದು ಅಭಿಮಾನಿಗಳ ಆಶಯ.